
ಉದಯವಾಹಿನಿ ಪೀಣ್ಯ ದಾಸರಹಳ್ಳಿ : ಐದು ವರ್ಷ ಅಧಿಕಾರದಲ್ಲಿದ ಜನ ಪ್ರತಿನಿಧಿ ಈ ಒಳಚರಂಡಿ ಕಾಮಗಾರಿ ಮಾಡಿ ಮುಗಿಸ ಬೇಕಾಗಿತ್ತು ಅದರೆ ಅವರಿಗೆ ಆರ್ ಕೆ ಎನ್ಕ್ಲೇವ್ ಬಡಾವಣೆಯ ಕಡೆ ಇಚ್ಚಾಶಕ್ತಿ ತೊರಲ್ಲಿಲ್ಲಾ ಎಂದು ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.ಶೆಟ್ಟಿಹಳ್ಳಿ ವಾರ್ಡಿನ ಆರ್ ಕೆ ಎನ್ಕ್ಲೇವ್ ಬಡಾವಣೆಯಲ್ಲಿ ಇಂದು ವಾರ್ಡಿನ ಬಿಜೆಪಿ ಅಧ್ಯಕ್ಷ ಬಿ ಸುರೇಶ್ ಅವರ ಸಮ್ಮುಖದಲ್ಲಿ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿ ಶಾಸಕ ಎಸ್ ಮುನಿರಾಜು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಹಾಗೂ ಆರ್ ಕೆ ಎನ್ಕ್ಲೇವ್ ಬಡಾವಣೆಯ ಮತ್ತು ಶೆಟ್ಟಿಹಳ್ಳಿ ವಾರ್ಡಿನ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.
