?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಉದಯವಾಹಿನಿ,ಶಿಡ್ಲಘಟ್ಟ : ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರೆ ತಿಂಗಳಲ್ಲಿ ನಾಲ್ಕು ಗ್ಯಾರಂಟಿ ಭಾಗ್ಯಗಳನ್ನು ನೀಡಿ ಜನರ ವಿಶ್ವಾಸಗಳಿಸಿದೆ. ಮುಂದೆ ಯಾವುದೇ ಯೋಜನೆಗಳನ್ನು ಕಾಂಗ್ರೆಸ್ ನೀಡಿದರೂ ಜನ ಸಾಮಾನ್ಯರಿಗೆ ತಲುಪುವಂತಹ ಕೆಲಸ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು. ನಗರದ ಹೊರವಲಯದಲ್ಲಿ ರೇಷ್ಮೆ ಹೈ-ಟೆಕ್ ಮಾರುಕಟ್ಟೆಯ ಸ್ಥಳ ಪರಿಶೀಲನೆ ಮಾಡಲು ಗುರುವಾರ ಆಗಮಿಸಿದ್ದ ಸಚಿವರುಗಳು ನಗರದ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಸಭೆ ನಡೆಸಿ ಮಾತನಾಡಿದರು.
ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿರುವ ಯೋಜನೆಗಳನ್ನು ಸಹಿಸದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಯತ್ತ ದಾಪುಗಾಲು ಇಡುತ್ತಿದ್ದಾರೆ ಆದರೆ ಅವರು ಎಷ್ಟೇ ಒಂದಾದರೂ ನಮ್ಮನ್ನ ಅಡಗಿಸಲು ಸಾಧ್ಯವಾಗುವುದಿಲ್ಲ.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಒಂದಾಗಿ, ನೀವೆಲ್ಲರೂ ಒಗ್ಗಟ್ಟಿನಿಂದ ಲೋಕಸಭಾ ಚುನಾವಣೆಗೆ ಸಹಕರಿಸಿ ಈ ಬಾರಿ ಶಿಡ್ಲಘಟ್ಟ ಕ್ಷೇತ್ರದಿಂದ ಅತಿ ಹೆಚ್ಚು ಮತಗಳನ್ನು ಕಾಂಗ್ರೆಸ್ ನಿಂದ ಪಡೆದು ಲೋಕಸಭಾ ಚುನಾವಣೆಯ ಅಭ್ಯರ್ಥಿಗೆ ಗೆಲ್ಲಲು ಸಹಕರಿಸಿ. ಮಾಜಿ ಮಂತ್ರಿಗಳು ವಿ.ಮುನಿಯಪ್ಪ ಇದ್ದಂತಹ ಕಾಂಗ್ರೆಸ್ ಪಕ್ಷ ಈಗ ಇಲ್ಲ. ನೀವು ಏನು ಬಣಗಳಾಗಿ ವಿಂಗಡಣೆಯಾಗಿದ್ದೀರಿ ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಿ, ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸಹಕರಿಸೋಣ ಎಂದರು.ಕರ್ನಾಟಕ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಮಾತನಾಡಿ ಶಿಡ್ಲಘಟ್ಟ ರೇಷ್ಮೆಯಲ್ಲಿ ವಿಶ್ವವಿಖ್ಯಾತ ಪ್ರಸಿದ್ದಿ ಪಡೆದ ಮಾರುಕಟ್ಟೆಯನ್ನು ಹೈ-ಟೆಕ್ ಮಾರುಕಟ್ಟೆ ಮಾಡುವ ಉದ್ದೇಶದಿಂದ ಹನುಮಂತಪುರ ಹಾಗೂ ವರದನಾಯಕನಹಳ್ಳಿ ಭಾಗದಲ್ಲಿ ಸುಮಾರು 20 ಎಕರೆ ಜಮೀನು ಗುರ್ತಿಸಿದ್ದು, ಸ್ಥಳ ವೀಕ್ಷಣೆ ಮಾಡಲಾಗಿದೆ. ಇನ್ನೂ ಕೆಲವು ರೈತರು ಒತ್ತುವರಿ ಮಾಡಿರುವ ಜಮೀನುಗಳನ್ನು ತೆರವುಗೊಳಿಸುವುದು ಬಾಕಿ ಇದೆ, ಆದರೂ ಈಗಾಗಲೆ ತೆರವಾದ ಹತ್ತು ಎಕರೆ ಜಮೀನಿನಲ್ಲಿ 80 ಕೋಟಿಯಲ್ಲಿ ಕಾಮಗಾರಿ ನಡೆಯಲಿದೆ, ಮುಂದೆ ನಮ್ಮ ಪಕ್ಷದಿಂದ 100ಕೋಟಿ ಬಿಡುಗಡೆಯಾಗಲಿದ್ದು, ಒಟ್ಟು 185 ಕೋಟಿಯ ಸುಸಜ್ಜಿತವಾದ ಹೈ-ಟೆಕ್ ಮಾರುಕಟ್ಟೆಯನ್ನು ರೇಷ್ಮೆ ಬೆಳೆಗಾರರಿಗೆ ಮತ್ತು ರೇಷ್ಮೆ ಉದ್ಯಮಿಗಳಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದರು.
ಈ ಭಾಗದಲ್ಲಿ ಹೆಚ್ಚು ರೇಷ್ಮೆ ಉದ್ಯಮಗಳಿದ್ದು ಮುಂದಿನ ದಿನಗಳಲ್ಲಿ ರೇಷ್ಮೆ ಉದ್ಯಮಿಗಳಿಗೆ ಸಾಲ ಸೌಲಭ್ಯ ಮತ್ತು ಉಚಿತ ವಿದ್ಯುತ್ ಸೌಲಭ್ಯ ನೀಡಲು ಸಂಬಂಧಿಸಿದ ಪಕ್ಷದ ನಾಯಕರನ್ನು ಮಾತನಾಡುತ್ತೇನೆ. ಈ ಭಾಗದಲ್ಲಿ ಹೆಚ್ಚು ಹೂ ಬೆಳೆಯುವಂತಹ ರೈತರಿರುವುದರಿಂದ ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ತಾಲೂಕಿಗೆ ಹೂವಿನ ಮಾರುಕಟ್ಟೆ ಹಾಗೂ ಎಪಿಎಂಸಿ ಮಾಡುಕಟ್ಟೆ ಮಾಡುವುದೇ ನನ್ನ ಗುರಿಯಾಗಿದೆ ಎಂದರು.
-ರಾಜೀವ್ ಗೌಡ, ಕೆಪಿಸಿಸಿ ಕೋ-ಆರ್ಡಿನೇಟರ್
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ನಗರಸಭೆ ಉಪಾಧ್ಯಕ್ಷ ಅಪ್ಸರ್ ಪಾಷ, ಚಿಲಕನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಯಾಸ್ಮಿನ್ ತಾಜ್ ,ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ ಗುಡಿಯಪ್ಪ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
