ಉದಯವಾಹಿನಿ,ದೇವರಹಿಪ್ಪರಗಿ: ಜನ-ಗಣ-ಮನ ಬೆಳೆಸೋಣ ಕಾರ್ಯಕ್ರಮದ ಹಿನ್ನೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಪ್ರಾರಂಭಿಸಿರುವ ಬ್ರಿಗೇಡಿನ ಬೈಕ್ ಯಾತ್ರೆ ದೇವರ ನಾಡು ದೇವರಹಿಪ್ಪರಗಿ ಪಟ್ಟಣಕ್ಕೆ ಶುಕ್ರವಾರದಂದು ಆಗಮಿಸಿತು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಚಕ್ರವರ್ತಿ ಸೂಲಿಬೆಲೆಯವರನ್ನು ಅದ್ದೂರಿಯಿಂದ ಸ್ವಾಗತಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಅಭಿವೃದ್ದಿ ಕೆಲಸಗಳನ್ನು ಮನೆ-ಮನೆಗೆ ಮುಟ್ಟಿಸುವುದು ಇದರ ಉದ್ದೇಶ. ಇನ್ನೂ 5 ವರ್ಷಗಳ ಅವರ ನಾಯಕತ್ವ ಇರಬೇಕು ಎಂದು ಸಂಕಲ್ಪ ಮಾಡಿ ಸುಮಾರು ಮೂರುವರೆ ಸಾವಿರ ಕಿ.ಮೀ. ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ಪಟ್ಟಣಕ್ಕೆ ಆಗಮಿಸಿತ್ತಿದ್ದಂತೆ ಪರದೇಶಿ ಮಠದ ಪ.ಪೂ.ಶಿವಯೋಗಿ ಮಹಾಸ್ವಾಮಿಗಳು, ಸದಯ್ಯನ ಮಠದ ಷ ಬ್ರ ವೀರಗಂಗಾಧರ ಶಿವಾಚಾರ್ಯರು ನೇತೃತ್ವದಲ್ಲಿ  ಪುಷ್ಪವೃಷ್ಟಿ ಮಾಡಿ ಸನ್ಮಾನಿಸಿಲಾಯಿತು.ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಿಬಿನಾಳ ಅವರು ಮಾತನಾಡಿ ದೇಶದಲ್ಲಿ ಪ್ರಧಾನಿ ಮೋದಿಯವರ ಅವಶ್ಯಕತೆಯಿದ್ದು ಎಲ್ಲರು ಜೊತೆಗೂಡಿ ಅವರನ್ನು ಮತ್ತೇ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು-ನೀವೆಲ್ಲರೂ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಸೂಲಿಬೆಲೆಯವರು ಮಾಡುವ ಬೈಕ್ ರ್ಯಾಲಿಗೆ ನಮ್ಮದು ಬೆಂಬಲವಿದೆ ದೇಶ ಉಳಿದರೆ ಎಲ್ಲರೂ ಬದುಕಲೂ ಸಾಧ್ಯವೆಂದರು.ಇದೇ ಸಂದರ್ಭದಲ್ಲಿ ಮುಖಂಡರಾದ ಸೋಮು ಹಿರೇಮಠ, ಶಿವಪದ್ಮ ಕೊಕಟನೂರ,ಚೇತನ್ ಇಂಡಿ,ಕಲ್ಮೇಶ್ ಬುದ್ನಿ, ಸೋಮು ದೇವೂರ,ಪುನೀತ್ ಹಿಪ್ಪರಗಿ,ಪವನ್ ಹೊನವಾಡ,ಸಚಿನ್ ಬುದ್ನಿ,ಚಿದಾನಂದ ಕುಂಬಾರ,ಪಿಂಟು ಬಸುತ್ಕಾರ, ಶ್ರೀಶೈಲ ಯಂಬತನಾಳ,ಸಾಗರ ತೋಟದ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಶುಭ ಹಾರೈಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಿಬಿನಾಳ ಅವರು ಮಾತನಾಡಿ ದೇಶದಲ್ಲಿ ಪ್ರಧಾನಿ ಮೋದಿಯವರ ಅವಶ್ಯಕತೆಯಿದ್ದು ಎಲ್ಲರು ಜೊತೆಗೂಡಿ ಅವರನ್ನು ಮತ್ತೇ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು-ನೀವೆಲ್ಲರೂ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಸೂಲಿಬೆಲೆಯವರು ಮಾಡುವ ಬೈಕ್ ರ್ಯಾಲಿಗೆ ನಮ್ಮದು ಬೆಂಬಲವಿದೆ ದೇಶ ಉಳಿದರೆ ಎಲ್ಲರೂ ಬದುಕಲೂ ಸಾಧ್ಯವೆಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಸೋಮು ಹಿರೇಮಠ, ಶಿವಪದ್ಮ ಕೊಕಟನೂರ,ಚೇತನ್ ಇಂಡಿ,ಕಲ್ಮೇಶ್ ಬುದ್ನಿ, ಸೋಮು ದೇವೂರ,ಪುನೀತ್ ಹಿಪ್ಪರಗಿ,ಪವನ್ ಹೊನವಾಡ,ಸಚಿನ್ ಬುದ್ನಿ, ಚಿದಾನಂದ ಕುಂಬಾರ,ಪಿಂಟು ಬಸುತ್ಕಾರ, ಶ್ರೀಶೈಲ ಯಂಬತನಾಳ,ಸಾಗರ ತೋಟದ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!