
ಉದಯವಾಹಿನಿ,ಇಂಡಿ: ತಾಲೂಕಿನ ಅಂಜುಟಗಿ ಗ್ರಾಮದ ವಸತಿ ಶಾಲೆಯಲ್ಲಿ ಕಳಪೆ ಮಟ್ಟದ ಆಹಾರ ಪೂರೈಕೆ ಶಶೀಧರ ಕೋಸಂಬೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರು ಬೆಂಗಳೂರು ಇವರಿಗೆ ವಿಧ್ಯಾರ್ಥಿನಿಯರು ಮೌಖೀಕ ದೂರು ನೀಡಿ ತಮ್ಮ ಅಳಲನ್ನು ತೋಡಿಕೊಂಡರು. ತಾಲೂಕಿನ ಅಂಜುಟಗಿ ಗ್ರಾಮದ ಸಮಾಜ ಕಲ್ಯಾಣ ಅಧೀನದಲ್ಲಿ ಬರುವ ಕಿತ್ತೂರ ರಾಣಿ ಚೆನ್ನಮ್ಮಾವಸತಿಶಾಲೆಯಲ್ಲಿ ವಿಧ್ಯಾರ್ಥಿನಿಯರು ಪ್ರತಿನಿತ್ಯ ಊಟ ಮಾಡುವಸಂಧರ್ಬದಲ್ಲಿ ಅನ್ನ ಬೆಳೆ, ಅಕ್ಕಿಯಲ್ಲಿ ಹುಳುಕಾಣಿಸಿಕೊಳ್ಳುತ್ತಿದ್ದು ಅನೇಕ ಬಾರಿ ವಸತಿ ನಿಲಯದ ಮೇಲ್ವಿಚಾರಕರಿಗೆ ಗಮನಕ್ಕೆತಂದರೂ ಪ್ರಯೋಜನವಾಗುತ್ತಿಲ್ಲ. ನಾವು ಪ್ರತಿ ನಿತ್ಯ ಸ್ನಾನ ಮಾಡಬೇಕಾದರೆ ಬಿಸಿ ನೀರಿನ ಸೌಲಭ್ಯ ಇಲ್ಲ ದಿನಾಲು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದೆವೆ.ನಾವು ಮಲಗುವ ಓದುವ ಕೋಣೆಗಳು ಕತ್ತಲೆಯಲ್ಲಿವೆ ಪ್ಯಾನಿನ ವ್ಯವಸ್ಥೆ ಇಲ್ಲ ಸ್ನಾನ: ಕೋಣೆಯ ಪೈಪಲೈನ್ ಬ್ಲಾಕ ಆಗಿ ನೀರು ನಿಲ್ಲುತ್ತಿವೆ ಇದ- ರಿಂದ ಗಬ್ಬು ವಾಸನೆ ಹಾಗೂ ಸೋಳ್ಳೆಗಳ ಕಾಟ ಹೆಚ್ಚಾಗಿವೆ. ಎಲ್ಲಾ ವಿಧ್ಯಾರ್ಥಿನಿಯರು ಅನೇಕ ಬಾರಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಕ್ಯಾರೆ ಎನ್ನುತ್ತಿಲ್ಲ ಎಂದು ವಿಧ್ಯಾರ್ಥಿನಿಯರು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರ ಮುಂದೆ ತಮ್ಮ ಅಳಲನ್ನು ತೊಡಿಕೊಂಡಿರು.ಪ್ರಸಕ್ತ ಸಾಲಿನಿಂದ ಇಲ್ಲಿಯವರೆಗೆ ಯಾವುದೇ ಸಾಮುಗಿಗಳ ಕಿಟ್ಟ ನೀಡಿಲ್ಲ, ವಿಷಯ ಬೋಧಿಸುವ ಶಿಕ್ಷಕರು ಸರಿಯಾಗಿ ಪಾಠಬೋಧನೆ ಮಾಡುತ್ತಿಲ್ಲ. ಶಿಕ್ಷಕರಲ್ಲಿ ಒಗಟ್ಟು ಇಲ್ಲ
ವಿಧ್ಯಾರ್ಥಿಗಳಿಗೆ ಕಲಿಸಬೇಕು ಎಂಬ ಛಲ ಇಲ್ಲ. ಶಿಕ್ಷಕರು ಗುಂಪುಗಾರಿಕೆ ಮಾಡುತ್ತಾರೆ ಅವರಲ್ಲಿ ಭಿನ್ನಾಭಿಪ್ರಾಯಗಳಿವೆ. ಮೇಲಾಧಿಕಾರಿಗಳ ಮುಂದೆ ಈ ಎಲ್ಲಾ ವಿಷಯ ಹೇಳಿದರೆ ನಮ್ಮನ್ನೆ ಟಾರ್ಗೇಟ್ ಮಾಡುತ್ತಾರೆ. 6ರಿಂದ 10ನೇ ತರಗತಿಯವರೆಗೆ ಫೀಜಿಕ್ಸ ಪಾಠ ಮಾಡಿಲ್ಲ ಎಂದು ವಿಧ್ಯಾರ್ಥಿಗಳು ಆಯೋಗ ಸದಸ್ಯರಿಗೆ ತಿಳಿಸಿದರು.ವಸತಿ ನಿಲಯ ಸ್ವಚ್ಛತೆ ಇಲ್ಲದಿರುವುದು ಹಾಗೂ ಆಹಾರ ದಾಸ್ತಾನು ವಹಿ ಇಲ್ಲದೆ ಇರುವುದು ಕಂಡು ಬಂದಿರುವದರಿಂದ ಪ್ರಾಂಶುಪಾಲ,ವಾರ್ಡನ್ ಹಾಗೂ ಶಿಕ್ಷಕರಿಗೆ ಮಕ್ಕಳ ಆಯೋಗದ ಸದಸ್ಯರು ಇನ್ನೊಮ್ಮೆ ಹೀಗಾಗದಂತೆ ಕ್ರಮಕೈಗೋಳ್ಳಿ ನಿಮ್ಮ ಕಾರ್ಯ ವೈಖರಿಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಲಾಗುವುದು ಎಂದು ತಾಕೀತು ಮಾಡಿದರು. ಸಾಮಾಜಿಕ ಕಾರ್ಯಕರ್ತರ ಗುರುರಾಜ ಇಟ್ಟಗಿ, ಶ್ರೀಮತಿ ಸುಧಾ ಮೇಲ್ವಿಚಾರಕಿ ಶಿಶು ಅಭಿವೃದ್ಧಿ ಯೋಜನೆ ಇಂಡಿ ಇದ್ದರು.
