ಉದಯವಾಹಿನಿ,ಯಾದಗಿರಿ: ಅಕ್ಟೋಬರ್ 06, ಮತಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಮುಂದಿಟ್ಟುಕೊAಡು ಹೋರಾಟ ಮಾಡುವ ಎಚ್ಚರಿಕೆ ನೀಡಿದಾಗ ನಾಮಕೆ ವಾಸ್ತೆ ಭೇಟಿ ನೀಡಿ ಕೆಲಸ ಮಾಡದೇ ಕೈಬಿಟ್ಟ ದಪ್ಪ ಚರ್ಮದ ಅಧಿಕಾರಿಗಳ ಚಳಿಬಿಡಿಸಲು ಬಾರಕೋಲು ಚಳವಳಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಯಾದಗಿರಿ ಮತಕ್ಷೇತ್ರದ ಗ್ರಾ[ಪಂ ಗಳಾದ ಮುದ್ನಾಳ, ಟೋಕಾಪುರ ವ್ಯಾಪ್ತಿಯ ಗೋಡಿಹಾಳ, ದೋರನಳ್ಳಿ, ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯ ಬೆಳಗೇರಿ, ಗಣಪೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೂಲ ಸೌಕರ್ಯಗಳಾದ ಸಿಸಿ ರಸ್ತೆ, ಚರಂಡಿ, ಶಾಲೆಯಲ್ಲಿ ಶುದ್ಧ ಕುಡಿವ ನೀರು, ಗಣಪೂರ ದೋರನಳ್ಳಿ ಗ್ರಾಮಗಳಲ್ಲಿ ನೀರಿನ ಟ್ಯಾಂಕ್ ಉದ್ಘಾಟನೆ ನನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಸಿಸಿ ರಸ್ತೆ ಚರಂಡಿ ಇರದ ಕಾರಣ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಗಬ್ಬೆದ್ದು ನಾರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹಬ್ಬುವ ಸಂಭವವಿದೆ ಈ ಘಟನೆಗಳು ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿರುವುದರ ಕಾರಣವೇನು? ಈಗಾಗಲೇ ಟಿವಿ, ಪತ್ರಿಕೆಗಳಲ್ಲಿ ಹಲವು ಬಾರಿ ವರದಿಗಳು ಬಂದರೂ ಕ್ರಮವಿಲ್ಲ ಏಕೆ ಎಂದು ಪ್ರಶ್ನಿಸಿದರು. ಈಗಾಗಲೇ ಹಲವು ಬಾರಿ ಸಂಬAಧಿಸಿದ ಪಿಡಿಓ, ತಾಪಂ ಇಓ, ಜೆಇ, ಸೇರಿದಂತೆ ಜಿಲ್ಲಾಡಳಿತಕ್ಕೆ ಗಮನಕ್ಕೆ ತಂದರೂ ಸಹ ಕ್ರಮ ಕೈಗೊಂಡಿಲ್ಲ. ಇದಲ್ಲದೇ ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಮುದ್ನಾಳ, ಟೋಕಾಪುರ, ಗೋಡಿಹಾಳ ಗ್ರಾಮದಲ್ಲಿ ಅಕ್ರಮ ಒತ್ತುವರಿ ಮಾಡಿ ಸರ್ಕಾರದ ಜಾಗೆಯನ್ನು ನುಂಗಿದವರ ವಿರುದ್ಧ ಇದುವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಸಂಬ0ಧಿಸಿದವರು ಇದುವರೆಗೂ ನೋಟೀಸ್ ಕೊಟ್ಟಿಲ್ಲ? ಮತ್ತು ಸಂಬAಧಿಸಿದ ಅಧಿಕಾರಿಗಳು ಸರ್ಕಾರಿ ಜಾಗೆ ರಕ್ಷಣೆ ಮಾಡಲು ಮುಂದಾಗದೇ ಇರುವ ಅಧಿಕಾರಿಗಳಿಗೆ ನೋಟೀಸ್ ಯಾಕೆ ಕೊಟ್ಟಿಲ್ಲ, ಕಠಿಣ ಕ್ರಮ ಏಕೆ ಕೈಗೊಂಡಿಲ್ಲ. ಅರ್ಹತೆ ಇಲ್ಲದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ತನಿಖೆ ನಡೆಸುವಂತೆ ಆಗ್ರಹಿಸಿದರು. ಕೂಡಲೇ ಮೂರು ದಿನಗಳಲ್ಲಿ ಜಿಲ್ಲಾಡಳಿತ ಜಿಪಂ ಸ್ಪಷ್ಟನೆ ನೀಡಬೇಕು ಇಲ್ಲವಾದಲ್ಲಿ ಬಾರುಕೋಲು ಚಳವಳಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!