ಉದಯವಾಹಿನಿ, ಜೈಪುರ: ಬಿಹಾರ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ ಬೆನ್ನಲ್ಲೇ, ರಾಜಸ್ತಾನದಲ್ಲಿಯೂ ಜಾತಿ ಗಣತಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಕಟಿಸಿದ್ದಾರೆ. ಬಿಹಾರದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಿರುವ ಬೆನ್ನಲ್ಲೇ ಗೆಹ್ಲೋಟ್‌ರಿಂದ ಈ ಹೇಳಿಕೆ ಹೊರಬಿದ್ದಿದೆ.
ಈ ವರ್ಷ ವಿಧಾನಸಭೆ ಚುನಾವಣೆಗೆ ಮುನ್ನ ರಾಜಸ್ಥಾನ ಸರ್ಕಾರ ರಾಜ್ಯದಲ್ಲಿ ಜಾತಿ ಗಣತಿ ನಡೆಸಲು ನಿರ್ಧರಿಸಿದೆ. ಎಂದು ಅವರು ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು ತಮ್ಮ ಸರ್ಕಾರ ಜಾತಿ ಗಣತಿಗೆ ಆದೇಶ ನೀಡಲಿದೆ. ಪ್ರಸ್ತುತ ದಿನಗಳಲ್ಲಿ ಜಾತಿ ಗಣತಿ ತುಂಬಾ ಅವಶ್ಯಕವಾಗಿದೆ. ಸರ್ಕಾರಕ್ಕೆ ಎಷ್ಟು ಜನಸಂಖ್ಯೆ ಇದ್ದಾರೆ. ಅದರಲ್ಲಿ ಯಾವ ಯಾವ ಸಮುದಾಯ ಎಷ್ಟಿದೆ. ಅವರ ಆರ್ಥಿಕ ಸಾಮಾಜಿಕ ಪರಿಸ್ಥಿತಿ ತಿಳಿಯಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಪರಿಕಲ್ಪನೆಗೆ ಪೂರಕವಾಗಿ ತಮ್ಮ ಸರ್ಕಾರ ರಾಜಸ್ತಾನದಲ್ಲಿ ಜಾತಿ ಗಣತಿ ನಡೆಸಿ ಅದರ ವರದಿಯನ್ನು ಬಿಡುಗಡೆ ಮಾಡಲಿದೆ. ’ಜನಸಂಖ್ಯೆ ಹೆಚ್ಚಾದಷ್ಟು ಹಕ್ಕುಗಳು ಹೆಚ್ಚಾಗುತ್ತವೆ’ ಎಂದು ತಿಳಿಸಿದರು.
ಜಾತಿ ಗಣತಿ ನಡೆಸುವ ಮೂಲಕ ನಾವು ರಾಹುಲ್ ಗಾಂಧಿಯವರ ಪರಿಕಲ್ಪನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ೨೦೧೧ ರ ಜನಗಣತಿಯ ಪ್ರಕಾರ, ರಾಜಸ್ಥಾನದ ಪ್ರಸ್ತುತ ಅಂದಾಜು ಜನಸಂಖ್ಯೆ ಸರಿಸುಮಾರು ೮.೩೬ ಕೋಟಿ ಜನರು ರಾಜ್ಯದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!