
ಉದಯವಾಹಿನಿ, ಸುರಪುರ : ೧೨ನೇ ಶತಮಾನದ ಬಸವವಾದಿ ಶರಣ ಶ್ರೀ ಹೂಗಾರ ಮಾದಯ್ಯನವರ ಜಯಂತ್ಯೋತ್ಸವನ್ನು ಅಖಂಡ ಕರ್ನಾಟಕ ಹೂಗಾರ ಮಹಾಸಭಾದ ವತಿಯಿಂದ ಸುರಪುರ ನಗರದ ತಹಶೀಲ್ದಾರ ಕಚೇರಿ ರಸ್ತೆಯ, ಬಡಿಗೇರ ಭಾವಿ ಹತ್ತಿರದ ಕಾಳಿಕಾದೇವಿ ದೇವಸ್ಥಾನದಲ್ಲಿ ಆಚರಿಸಲಾಯಿತು. ಹೂಗಾರ ಸಮಾಜದ ಸುರಪುರ ಅಧ್ಯಕ್ಷರಾದ ಶ್ರೀ ಮಲ್ಲು ಹೂಗಾರ ಬಿಜಾಸಪೂರ ಕಾರ್ಯಕ್ರಮನ್ನ್ನುದ್ದೇಶಿಸಿ ಮಾತನಾಡಿದರು. ಹೂಗಾರ ಸಮಾಜದ ಗುರುಗಳಾದ ಗುರುದೇವ ಶರಣರು ಜಯಂತಿಯನ್ನು ಉದ್ದೇಶಿಸಿ ವಚನಗಳನ್ನು ಪ್ರಸ್ತುತಪಡಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಬನ್ನಪ್ಪ ಪೂಜಾರಿ ಮೈಲಾಪುರ್ ಸಮಾಜದ ಸಾಧಕ ಬಾಧಕಗಳ ಕುರಿತು ಮಾತನಾಡಿದರು, ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಭೀಮಣ್ಣ, ಶಾಂತವೀರ್ ಚಿತ್ರಗಾರ ಸುರಪುರ,ಮಲ್ಲಪ್ಪ ಹೂಗಾರ್ ರುಕ್ಮಾಪೂರ, ವೆಂಕೋಬ್ ಹೂಗಾರ ಸುರಪುರ, ಬಸವರಾಜ್ ಹೂಗಾರ ದೇವರಗೋನಾಲ, ಸೇರಿದಂತೆ ಸಮಾಜದ ಮುಖಂಡರು ಇದ್ದರು.. ಹಾಗೂ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಜಯಂತಿ ಹಿನ್ನೆಲೆ ಹಣ್ಣು- ಹಂಪಲು ವಿತರಣೆ ಮಾಡಲಾಯಿತು
