
ಉದಯವಾಹಿನಿ ಮುದಗಲ್: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ಚಿಕಿತ್ಸೆ ಶಿಬಿರ ಉದ್ಘಾಟನಾ ಮುನ್ನವೇ ಎ.ಸಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಘಟನೆ ಜರುಗಿತು. ಪಟ್ಟಣದ ದಿವ್ಯ ದೃಷ್ಟಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ಚಿಕಿತ್ಸೆ ಕಾರ್ಯಕ್ರಮದಲ್ಲಿ ಡಾ.ಅಭಿ ಅವರಿಗೆ ಎ.ಸಿ ಶಾರ್ಟ್ ಸರ್ಕ್ಯೂಟ್ ತಗುಲಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಘಟನೆ ಕಂಡುಬಂದಿತು. ಉಚಿತ ನೇತ್ರ ಚಿಕಿತ್ಸೆ ಕಾರ್ಯಕ್ರಮ ನ. 3 ರಿಂದ ಮತ್ತೆ ಪ್ರಾರಂಭ ಮಾಡುತ್ತೇವೆಂದು ನೇತ್ರ ಚಿಕಿತ್ಸೆ ಶಿಬಿರದ ಆಯೋಜಕರು ತಿಳಿಸಿದರು. ವೈದ್ಯರನ್ನು ಬಿಟ್ಟು ಯಾರಿಗೂ ಅಹಿತಕರ ಘಟನೆ ಜರುಗಿಲ್ಲ. ಸಾವಿರಾರು ಸಂಖ್ಯೆಯಲ್ಲಿ ನೇತ್ರ ಚಿಕಿತ್ಸಾ ಶಿಬಿರಾರ್ಥಿಗಳು ತಮ್ಮ ಲಗೇಜ್ ನೊಂದಿಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದರು. ಎ.ಸಿ ರೂಂ ಹೊಗೆ ಕಲರ್ ಫುಲ್ಲಾಗಿರುದನ್ನು ಕಂಡು ಶಿಬಿರಾರ್ಥಿಗಳು ಸಮುದಾಯ ಕೇಂದ್ರದ ಹೊರಗೆ ದಾವಿಸಾತೊಡಗಿದರು.
ಚಿಕಿತ್ಸೆಗಾಗಿ ಬಂದ ಚಿಕಿತ್ಸೆ ಸಿಗದೆ ಪರದಾಡಿದರು. ವಿವಿಧ ಕಡೆಯಿಂದ ಬಂದ ಚಿಕಿತ್ಸೆ ಸಿಗದೇ ಬೇಸರಗೊಂಡು ತಮ್ಮ ಊರಿಗೆ ಮರಳಿದರು.
