ಉದಯವಾಹಿನಿ,ಚಿಂಚೋಳಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದ ಎಲ್ಲಾ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತ ದೇಶದ ಸಂವಿಧಾನ ಬರೆದು ಶ್ರೀಮಂತರಿಗೂ ಒಂದೇ ಓಟು ಬಡವರಿಗೂ ಒಂದೇ ಓಟಿನ ಹಕ್ಕು ನೀಡಿ ಸರ್ವರಿಗೂ ಸಮಾನವಾದ ಹಕ್ಕು ನೀಡಿದರು ಎಂದು ಶಿಕ್ಷಣ ಸಂಯೋಜಕ ಅಶೋಕ ಹೂವಿನಭಾವಿ ಹೇಳಿದರು.
ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತಾಲ್ಲೂಕಾ ವಿಧ್ಯಾರ್ಥಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ನಡೆ ಸಂವಿಧಾನದ ಕಡೆ ಎಂಬ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು,ಸಂವಿಧಾನದ ಅಡಿಯಲ್ಲಿ ಅಂಬೇಡ್ಕರ್ ರವರು ಸರ್ವರಿಗೂ ಅವಕಾಶ ನೀಡಿದ್ದು ನಾವೆಲ್ಲರೂ ದೇಶದಲ್ಲಿ ಇರಲು ಅಂಬೇಡ್ಕರ್ ಬರೆದ ಸಂವಿಧಾನದ ಹಕ್ಕಿನಿಂದ ತಪ್ಪು ಕಂಡುಬಂದಲ್ಲಿ ಪ್ರೇಶ್ನೆ ಕೇಳುವ ಧೈರ್ಯ ತುಂಬಿದು ಸಂವಿಧಾನ, ದೇಶದಲ್ಲಿ ಏತ್ತರಮಟ್ಟಕ್ಕೆ ಬೆಳೆದು ಶಾಸಕರು,ಸಂಸದರು,ಜನಪ್ರತಿನಿಧಿ ಆಗಲು ಸಂವಿಧಾನವೆ ಕಾರಣ,ಕೆಲ ಪಟ್ಟಭದ್ರ ಶಕ್ತಿಗಳ ಮಾತು ಕೇಳದೆ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ನ್ಯಾಯ ಪಡೆದುಕೊಳ್ಳಬೇಕು ನಮಗೆಲ್ಲ ಸ್ವೂರ್ತಿ ಸಂವಿಧಾನವಿದೆ ಎಂದರು.ಬಸವರಾಜ ಮೇತ್ರಿ ಕನಕಪುರ,ರಾಮಶೇಟ್ಟಿ ಮಾಡಗೋಳ ಮಾತನಾಡಿದ್ದರು.ತಾಲ್ಲೂಕಾ ವಿಧ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಯಲ್ಲಾಲಿಂಗ ದಂಡಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ವಾಸಿಂ ಆಕ್ರಂ ಸ್ವಾಗತಿಸಿದರು,ಶರಣು ತೇಗಲತೀಪ್ಪಿ ನಿರೂಪಿಸಿದರು,ಅಶೋಕ ಬಾಬು ವಂದಿಸಿದರು. ಈ ಸಂದರ್ಭದಲ್ಲಿಶರಣು ಟಿಟಿ,ಪ್ರವೀಣ ಮೇತ್ರಿ,ಕಾಲೇಜಿನ ಪ್ರಾಶುಂಪಾಲ ಅಂಬಾರಾಯ ಮೋತಿ ಅಧ್ಯಕ್ಷತೆ ವಹಿಸಿದ್ದರು.ಅಂಬರೀಷ್ ರಾಯಕೋಡ ಸೇರಿದಂತೆ ಕಾಲೇಜಿನ ಉಪನ್ಯಾಸಕರು,ವಿಧ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!