ಉದಯವಾಹಿನಿ ಚಿಂಚೋಳಿ: ತಾಲ್ಲೂಕಿನಲ್ಲಿ ಅನೇಕ ದಿನಗಳಿಂದ ಹವಾಮಾನ ವಾತಾವರಣದಲ್ಲಿ ಏರುಪೇರು ಆಗಿರುವುದರಿಂದ ಜನರಲ್ಲಿ ಕೆಮ್ಮು,ನೆಗಡಿ,ಜ್ವರ,ಕೈಕಾಲು ನೋವು,ಕೀಲುನೋವು,ವೈರಾಣು ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಸರ್ಕಾರಿ ಸಾರ್ವಜನಿಕ ಆಸ್ವತ್ರೇಗೆ ದೌಡಾಯಿಸಿ ಬಂದು ಚಿಕಿತ್ಸೆ ಪಡೆಯುತ್ತಿದ್ದು ಆಸ್ವತ್ರೆಯಲ್ಲಿ ಹಾಸಿಗೆಗಳು ಭರ್ತಿಯಾಗಿವೆ.ತಾಲ್ಲೂಕಿನ ವ್ಯಾಪ್ತಿಯಲ್ಲಿ ಜನರಲ್ಲಿ ಕೆಮ್ಮು,ನೆಗಡಿ,ಜ್ವರ,ಮೈಕೈನೋವು,ಕೀಲುನೋವು,ಹೀಗೆ ಅನೇಕ ತರಹದ ಜನರು ಚಿಕಿತ್ಸೆಗೆ ಬಂದಾಗ ರಕ್ತ ಪರೀಕ್ಷೆ ಹಾಗೂ ಇನ್ನೀತರ ಪರೀಕ್ಷೆಗಾಗಿ ಕಳೆದ ಜನೆವರಿ ತಿಂಗಳಿಂದ ಅಕ್ಟೋಬರ್ 5ರವರೆಗೆ ಒಟ್ಟಾರೆ 825ಜನರ ಸ್ಯಾಂಪಲ್ ಅನ್ನು ಜಿಲ್ಲಾ ಆಸ್ವತ್ರೇಗೆ ರವಾನಿಸಲಾಗಿದ್ದು ಅದರಲ್ಲಿ 25ಡೆಂಗ್ಯೂ ಜ್ವರ,19ಚಿಕನಗೂನ್ಯಾ ರೋಗಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆಯ ಟಿಹೆಚ್ಓ ಡಾ.ಮಹ್ಮುದ್ ಗಫಾರ್ ತಿಳಿಸಿದ್ದಾರೆ.ಸಾರ್ವಜನಿಕರು ಯಾವುದೇ ರೋಗಗಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ ಸಣ್ಣಪುಟ್ಟ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡರೆ ಸಮೀಪದ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಸಮಯಕ್ಕೆ ತಕ್ಕಂತೆ ವೈದ್ಯರು ನೀಡಿದ ಗುಳಿಗೆಗಳು ಪಡೆದು ಆರೋಗ್ಯವಂತರಾಗಬೇಕು. ವೈರಾಣು ಸೋಂಕುಗೆ ಸಮಯ ನೀಡಿ ಎರಡ್ಮೂರು ಹಂತದಲ್ಲಿ ಹೋದರೆ ಸ್ವಲ್ಪ ಆರೋಗ್ಯದಲ್ಲಿ ತೊಂದರೆ ಆಗುತ್ತೆ ಆದರೆ ಭಯಪಡದೆ ಒಳ್ಳೆಯ ಚಿಕಿತ್ಸೆ ಪಡೆದರೆ ಶೀಘ್ರದಲ್ಲೇ ಗುಣಮುಖರಾಗುತ್ತಾರೆ.
ಡೆಂಗ್ಯೂ ಜ್ವರ ಲಕ್ಷಣ: ಜ್ವರ,ಕೆಮ್ಮು,ತಲೆನೋವು,ಭೇದಿ,ಮೈಕೈನೋವು,ಹೊಟ್ಟೆನೋವು,ರಕ್ತದೊತ್ತಡದಲ್ಲಿ ಏರುಪೇರು ಆಗಿದ್ದಾಗ ಇಂಥಹ ಲಕ್ಷಣಗಳು ಕಂಡುಬಂದರೆ ಡೆಂಗ್ಯೂ ಜ್ವರ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವೈದ್ಯರು ಹೇಳುವ ಮಾತಾಗಿದೆ.ಸ್ವಚ್ಚತೆ ಇಲ್ಲದ ಸ್ಥಳದಲ್ಲಿ ಸೊಳ್ಳೆಯ ಜನ್ಮ: ಮನೆಯ ಸುತ್ತಮುತ್ತಲಿನ ಪ್ರದೇಶ ಹಾಗೂ ಮನೆಯಲ್ಲಿ ಟೈರ್ ನಲ್ಲಿ ನೀರು ನಿಲ್ಲುವುದರಿಂದ,ತೆಗ್ಗುಗಳಲ್ಲಿ,ಚರಂಡಿ ಸ್ವಚ್ಚತೆ ಇಲ್ಲದಿರುವುದರಿಂದ ಬಚ್ಚಲು ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ವತಿಯಾಗುತ್ತವೆ ಅದನ್ನೂ ಕಚ್ಚಿದರೆ ಡೆಂಗ್ಯೂ ರೋಗ ಬರುವ ಲಕ್ಷಣಗಳು ಬಹುತೇಕ ಖಚಿತವಾಗುತ್ತದೆ.
ಚಿಕನಗೂನ್ಯಾ ಲಕ್ಷಣಗಳು: ಸೊಳ್ಳೆ ಕಡಿತದಿಂದ,ಕೀಲುನೋವು,ಮೈಕೈನೋವು,ವಾಂತಿ ಹೀಗೆ ಚಿಕನಗೂನ್ಯಾ ರೋಗ ಕಾಣಿಸಿಕೊಳ್ಳತ್ತದೆ.ಈಗಾಗಲೇ ಕಲಭಾವಿ ತಾಂಡಾದಲ್ಲಿ ಚಿಕನಗೂನ್ಯಾ,ಡೆಂಗ್ಯೂ ಜ್ವರದ 87 ಜನರ ಸ್ಯಾಂಪಲ್ ಪಡೆಯಲಾಗಿತ್ತು ಅದರಲ್ಲಿ 08ಜನರಿಗೆ ಡೆಂಗ್ಯೂ ಹಾಗೂ ಚಿಕನಗೂನ್ಯಾ ರೋಗ ಪತ್ತೆಯಾಗಿರುವುದು ಕಂಡುಬಂದಿರುತ್ತದೆ.
 ಎರಡು ವೈದ್ಯರ ವರ್ಗಾವಣೆ ಆಗಿದೆ: ತಾಲ್ಲೂಕಾ ಸರ್ಕಾರಿ ಸಾರ್ವಜನಿಕ ಆಸ್ವತ್ರೆಯಲ್ಲಿ ಎಲ್ಲಾ ವೈದ್ಯರು ಇದ್ದು ಎರಡು ವೈದ್ಯರಾದ ಚರ್ಮ ವೈದ್ಯ ಹಾಗೂ ಅನೋಸೋತೀಯಾ ತಜ್ಞ ವೈದ್ಯರ ಕೊರತೆಯಿದೆ ಎರಡು ವೈದ್ಯರಾದ ಮಹಿಳೆಯರ ತಜ್ಞ ವೈದ್ಯ ಡಾ.ಕೌಸರ್ ಫಾತೀಮಾ,ಹಾಗೂ ಹೃದಯಘಾತ,ಬಿಪಿ,ಶೂಗರ್ ನೂರಿತ ತಜ್ಞ ಡಾ.ಅನೀಲಕುಮಾರ ವರ್ಗಾವಣೆ ಆಗಿದ್ದಾರೆ ಆದರೆ ನಾನು ಆಸ್ವತ್ರೇಯಿಂದ ಬಿಡುಗಡೆಗೊಳಿಸಿಲ್ಲ ಎಂದು ಆಸ್ವತ್ರೇಯ ಆಡಳಿತಾಧಿಕಾರಿ ಡಾ.ಸಂತೋಷ ಪಾಟೀಲ ತಿಳಿಸಿದ್ದಾರೆ.
ವೈರಾಣು ಸೋಂಕು ಕಾಣಿಸಿಕೊಳ್ಳುತ್ತಿದ್ದು ಯಾರು ಹೆದರುವ ಅವಶ್ಯಕತೆಯಿಲ್ಲ,ಎಲ್ಲೋರಿಗೂ ಸೋಂಕು ತಗುಲುವ ಸಾಧ್ಯತೆಯಿದ್ದು,ಸ್ವಲ್ಪದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಬೇಕು.
ಕೆಮ್ಮ,ಜ್ವರ,ನೆಗಡಿ,ಮೈಕೈನೋವು,ತಲೆನೋವು, ಕಾಣುತ್ತಿದೆ ಭಯವಿಲ್ಲದೆ ಚಿಕಿತ್ಸೆ ಪಡೆಯಿರಿ ಈಗಾಗಲೇ 825ಜನರಿಗೆ ಸ್ಯಾಂಪಲ್ ಪರೀಕ್ಷೆ ಕಲಬುರ್ಗಿಗೆ ರವಾನಿಸಲಾಗಿದ್ದು,ಡೆಂಗ್ಯೂ 25ಜನರಿಗೆ,ಚಿಕನಗೂನ್ಯಾ 19ಜನರಿಗೆ ಕಾಣಿಸಿಕೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ :– ಡಾ.ಮಹ್ಮುದ್ ಗಫಾರ್  ತಾಲ್ಲೂಕಾ ವೈದ್ಯಾಧಿಕಾರಿ ಚಿಂಚೋಳಿ.
ಹವಾಮಾನ ವಾತಾವರಣದಲ್ಲಿ ಏರುಪೇರು ಆಗಿರುವುದರಿಂದ ಕೆಮ್ಮು,ಜ್ವರ,ನೆಗಡಿ,ಮೈಕೈನೋವು,ಕೀಲುನೋವು,ಕಾಣಿಸಿಕೊಳ್ಳುತ್ತಿದೆ,ಮನೆಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಚತೆಯಿಡಿ,ಮನೆಯ ಅಕ್ಕಪಕ್ಕ ಮನೆಯ ಮೇಲೆ ಟೈರನಲ್ಲಿ ನೀರು ನಿಲ್ಲುವುದು,ಚರಂಡಿ ನೀರು,ನೀರು ತುಂಬುವ ಹರಿಯಲ್ಲಿ,ಬ್ಯಾರೇಲ,ಸ್ವಚ್ಚತೆ ಕಾಪಾಡಿ ಇದರಿಂದ ಸೊಳ್ಳೆ ಉತ್ವತಿಯಾಗಿ ಕಚ್ಚುವುದರಿಂದ ಚಿಕನಗೂನ್ಯಾ,ಡೆಂಗ್ಯೂ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಮಕ್ಕಳ ಮೇಲೆ ತಂದೆ ತಾಯಿಯಂದಿರು ಹೆಚ್ಚಿನ ಗಮನಹರಿಸಿ ಯಾವುದಾದರೂ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆಸ್ವತ್ರೇಯಲ್ಲಿ ಚಿಕಿತ್ಸೆ ಪಡೆದುಕೋಳ್ಳಿ :- ಡಾ.ಸಂತೋಷ ಪಾಟೀಲ ಆಡಳಿತಾಧೀಕಾರಿ ಸರ್ಕಾರಿ ಸಾರ್ವಜನಿಕ ಆಸ್ವತ್ರೆ ಚಿಂಚೋಳಿ.

Leave a Reply

Your email address will not be published. Required fields are marked *

error: Content is protected !!