ಉದಯವಾಹಿನಿ ದೇವದುರ್ಗ: 33 ಗ್ರಾಪಂ ವ್ಯಾಪ್ತಿಯ ಯಾವುದೇ ಕಾಮಗಾರಿಗಳು ಸ್ಥಗಿತಗೊಂಡಿವೆ. ಇಲ್ಲಸಲ್ಲದ ಕಾರಣಗಳ ನೆಪಗಳು ಹೇಳಿಕೊಂಡು ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು ಎಂದು ದೇವದುರ್ಗ ತಾಲೂಕ ಗ್ರಾಮ ಪಂಚಾಯತ ಒಕ್ಕೂಟ ತಾಲೂಕ ಸಮಿತಿ ಪದಾಧಿಕಾರಿಗಳು ಶನಿವಾರ ತಾಪಂ ಮ್ಯಾನೇಜರ್ ಚನ್ನರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಅನುಸರಿಸುತ್ತಿದ್ದರಿಂದ ವಾರ್ಡ್‍ನಲ್ಲಿ ಅಭಿವೃದ್ಧಿ ಕುಠಿತ ಸಾಗಿದೆ. ಚುನಾವಣೆ ವೇಳೆ ಮತಕೊಟ್ಟಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗುತ್ತಿಲ್ಲ ಎಂದು ದೂರಿದರು. ತಾಲೂಕಿನ 33 ಗ್ರಾಪಂಯಲ್ಲಿ 2023-24ನೇ ಸಾಲಿನ ಎಂಜಿಎನ್‍ಆರ್‍ಇಜಿ ಯೋಜನೆಯಡಿಯಲ್ಲಿ ಸಾಮಾಗ್ರಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಎಂಜಿಎನ್‍ಆರ್.ಇಜಿ ಯೋಜನೆಯ ಕಳೆದ ಸಾಲಿನ ಎಫ್‍ಟಿಓಗಳ ತನಿಖಾ ವರದಿಯನ್ನು ಜಿಪಂಗೆ ಸಲ್ಲಿಸಬೇಕು. ಎಂಜಿಎನ್‍ಆರ್‍ಇಜಿ ಯೋಜನೆಯ ವಾರ್ಷಿಕವಾಗಿ 2ಕ್ರಿಯಾ ಯೋಜನೆಯನ್ನು ಮಂಜೂರು ಮಾಡಿಕೊಡಬೇಕು. 33 ಗ್ರಾಪಂಗಳಲ್ಲಿ 2023-24ನೇ ಸಾಲಿನ ನೇರಗಾ ಯೋಜನೆಯಡಿ ಜಾನುವಾರು ಟಿನ್‍ಶೆಡ್, ಬದು ನಿರ್ಮಾಣ, ಕೃಷಿಹೊಂಡು ಕಾಮಗಾರಿಗಳನ್ನು ಯಾವುದೇ ಕರಾರುಗಳು ಇಲ್ಲದೇ ನೀಡಬೇಕು. ಅಪೂರ್ಣಗೊಂಡ ಕಾಮಗಾರಿಗಳ ಕೂಲಿ ಮೊತ್ತವನ್ನು ಡಿಮಾಂಡ್ ಹಾಕಬೇಕು. ಒಂದು ವಾರದಲ್ಲಿ ಬೇಡಿಕೆಗಳು ಈಡೇರಿಸದಿಲ್ಲ ಕಚೇರಿ ಮುಂದೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಚನ್ನಪ್ಪಗೌಡ ರಾಮದುರ್ಗ, ಬೂದೆಪ್ಪ ಕ್ಯಾದಗಿ, ನಾಗರಾಜ ಅಬಕಾರಿ, ಉಪಾಧ್ಯಕ್ಷ ಹೇಮನೂರಪ್ಪ ಕನ್ನಾಳ, ಎಂಎಸ್ ಪಾಟೀಲ್, ತಿರುಪತಿ ನಾಯಕ ಸದಸ್ಯರಾದ ಶಿವುಕುಮಾರ ಅಕ್ಕರಕಿ, ರಾಜಪ್ಪ ಗಬ್ಬೂರು, ಮರೆಣ್ಣ ನಾಯಕ, ಶಿವನಗೌಡ ದೇಸಾಯಿ ಕಕ್ಕಲದೊಡ್ಡಿ, ಅಮರೇಗೌಡ ಪಾಟೀಲ್ ಗಾಣಧಾಳ, ಸೇರಿ ಇತರರು ಇದ್ದರು.
