ಉದಯವಾಹಿನಿ ದೇವದುರ್ಗ: ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ಗುಣಮಟ್ಟ ಕಾಯ್ದಿಕೊಳ್ಳಬೇಕು ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ನಾಯಕ ಹೇಳಿದರು. 4ಕೋಟಿ ರೂ. ವೆಚ್ಚದ ಪಾಲಿಟೆಕ್ನಿಕ ಕಾಲೇಜು ಹೆಚ್ಚುವರಿ ಕೊಠಡಿಗಳು, 20 ಸರಕಾರಿ ಶಾಲೆಗಳ ಶೌಚಾಲಯಗಳ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ನಿಗದಿತ ಅವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಅಧಿಕಾರಿಗಳು, ಗುತ್ತೆದಾರರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು. ಸರಕಾರದ ಯಾವುದೇ ಯೋಜನೆಗಳು ಸರಿಯಾಗಿ ಸದ್ಬಳಿಕೆ ಮಾಡಿಕೊಳ್ಳಬೇಕು. ಆಗಾಗ ಕಾಮಗಾರಿ ಪರಿಶೀಲನೆ ಮಾಡಲು ಸ್ಥಳಕ್ಕೆ ಬರುತ್ತೇನೆ. ಬಂದಾಗ ಯಾವಾದರೂ ತಪ್ಪುಗಳು ಕಂಡಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಶೌಚಾಲಯ, ಹೆಚ್ಚುವರಿ ಕಾಲೇಜ್ ಕೊಠಡಿಗಳ ಕೆಲಸ ಗುಣಮಟ್ಟ ಕಾಯ್ದಿಕೊಳ್ಳಬೇಕು. ಶಾಲಾ ಶಿಕ್ಷಕರು, ಕಾಲೇಜ್ ಪ್ರಾಚರ್ಯರು ಕೆಲಸ ಬಗ್ಗೆ ಕಾಳಜಿ ವಹಿಸಬೇಕು. ಕಳಪೆ ಕಾಮಗಾರಿ ಕಂಡು ಬಂದಾಗ ನನ್ನ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು. ಚುನಾವಣೆ ಪೂರ್ವದಲ್ಲಿ ಸರಕಾರಿ ಬಾಲಕಿಯರ ಪ್ರೌಢ ಶಾಲೆಗೆ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ಶೌಚಾಲಯ ಸಮಸ್ಯೆಯನ್ನು ಗಮನಕ್ಕೆ ತಂದಿದ್ದರು. ಗೆದ್ದ ಬಳಿಕ ಅವರ ಬೇಡಿಕೆಗಳು ಈಡೇರಿಸಿದಂತಾಗಿದೆ. ಇನ್ನು ಕೆಲ ವಿಷಯವಾರ ಶಿಕ್ಷಕರ ಕೊರತೆ ಇದ್ದು, ಸರಕಾರದ ಮಟ್ಟದಲ್ಲಿ ಸಂಬಂಧಪಟ್ಟಂತ ಸಚಿವರ ಗಮನಕ್ಕೆ ತರಲಾಗುತ್ತೆ ಎಂದು ಹೇಳಿದರು. ಶಿಕ್ಷಕರ ಸಮಸ್ಯೆ ಹಂತ ಹಂತವಾಗಿ ಬಗೆಹರಿಸಲು ಕ್ರಮವಹಿಸುತ್ತೇನೆ. ಅತಿಥಿ ಶಿಕ್ಷಕರ ನೇಮಕಾತಿಯಿಂದ ಸ್ವಲ್ಪ ಸಮಧಾನ ತಂದಿದೆ. ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಕೊರತೆ ಶಾಲೆಗಳಿಗೆ ಸರಕಾರ ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕಿದೆ. ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಹೆಚ್ಚುವರಿ ಕೊಠಡಿಗಳ ನಿರ್ಮಿಸಿಲು ಜವಬ್ದಾರಿ ಹೊತ್ತಿರುವ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದರು. ಕೊಠಡಿ ಕೊರತೆ ಹಿನ್ನೆಲೆ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಸಲು ಸಮಸ್ಯೆ ಇದೆ. ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಬೇಕು. ಯಾವುದೇ ಕಾರಣಕ್ಕೆ ಜನರಿಂದ ದೂರುಗಳು ಬರದಿರುವ ರೀತಿಯಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶರಣಪ್ಪ ಬಳೆ, ಇಸಾಕ್ ಮೇಸ್ತ್ರೀ, ಶೇಖಮುನ್ನ ಬೈ, ದೊಡ್ಡರಂಗಣ್ಣ ಗೋವಿಂದರಾಜ ನಾಯಕ, ರಾಜಾರಂಗಪ್ಪ ನಾಯಕ, ಪಾಟೀಲ್, ರೇಣುಕಾ ಮಯೂರಸ್ವಾಮಿ, ಪ್ರಭಾರ ಬಿಇಒ ಶಿವರಾಜ ಪೂಜಾರಿ, ಪ್ರಾಚಾರ್ಯ ಶಿವುಕುಮಾರ, ಮುಖ್ಯಶಿಕ್ಷಕ ಶರಣಗೌಡ, ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಖೆ ಸೇರಿ ಉಪಾನ್ಯಸಕರು, ಶಿಕ್ಷಕರು ಇದ್ದರು.

Leave a Reply

Your email address will not be published. Required fields are marked *

error: Content is protected !!