?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಉದಯವಾಹಿನಿ ಶಿಡ್ಲಘಟ್ಟ: ಇಂದಿರಾಗಾಂಧಿ ಅವರು ಉಳುವವನೇ ಭೂಮಿಯ ಒಡೆಯ ಎಂದಿದ್ದರು. ಆದರೆ ಈಗ ಅದನ್ನ ಕಿತ್ತು ತಿನ್ನುತ್ತಿರುವ ಕಾಂಗ್ರೆಸ್ ಸರ್ಕಾರವೂ ಅವರದೇ? ಹಾಗಾದ್ರೆ ಅಂದು ಇಂದಿರಾಗಾಂಧಿ ಅವರು ಸುಳ್ಳು ಹೇಳಿದ್ರಾ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಎಸ್ ಮುನಿಸ್ವಾಮಿ ಗುಡುಗಿದರು.ನಗರದ ಬಿಜೆಪಿಯ ಸೇವಾಸೌಧದಲ್ಲಿ ಅರಣ್ಯ ಅಧಿಕಾರಿಗಳಿಂದ ರೈತರಿಗೆ ಆಗಿರುವ ಅನ್ಯಾಯದ ಕುರಿತು ಮಾತನಾಡಿದರು.ಈ ಹಿಂದೆ ಕಾಗೋಡು ತಿಮ್ಮಪ್ಪ ಅರಣ್ಯ ಸಚಿವರಾಗಿದ್ದಾಗ ರೈತರ ಪರವಾಗಿ ಸುತ್ತೋಲೆಯ ಪ್ರಕಾರ ಅರಣ್ಯ ಭೂಮಿಯಲ್ಲಿ ಎರಡು -ಮೂರು ಎಕರೆ ಹೊಂದಿರುವಂತಹ ರೈತರು ಸ್ವಾಭಾವಿಕವಾಗಿ ವ್ಯವಸಾಯ ಮಾಡಲು ಆದೇಶ ಹೊರಡಿಸಿದ್ದರು. ಕಾಂಗ್ರೆಸ್ ಸರ್ಕಾರವು ರೈತ ವಿರೋಧಿ ನೀತಿಗಳನ್ನು, ರೈತ ವಿರೋಧಿ ಆಡಳಿತವನ್ನು ಮಾಡುತ್ತಿರುವುದು  ದುಷ್ಟ ಸರ್ಕಾರ. ರೈತರು ಸುಮಾರು ವರ್ಷಗಳಿಂದ ದುಡಿಮೆ ಮಾಡಿಕೊಂಡು ಬರುತ್ತಿರುವ ಭೂಮಿಯನ್ನು ಸರ್ಕಾರ ಅಕ್ರಮವಾಗಿ ವಶಕ್ಕೆ ಪಡೆದು ರೈತರನ್ನು ಬೀದಿಗೆ ತರಲಾಗಿದೆ.
 ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿ ತಲಕಾಯಲಬೆಟ್ಟ ಭಾಗದ ರೈತರ ಪರವಾಗಿ ಹೋರಾಟ ಮಾಡಲು ನಾನು ಸದಾ ಸಿದ್ದ ಎಂದು ಸಂಸದ ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯ ರೈತರ ಜೊತೆ ವಿಧಾನಸೌಧ ಚಲೋ ಕಾರ್ಯಕ್ರಮ ಆಯೋಜಿಸಿ ಕಾಲ್ನಡಿಗೆ ಮೂಲಕ ಹೋರಾಟ ಮಾಡಲು ಸಿದ್ದರಾಗಿ ಎಂದು ರೈತರಿಗೆ ತಿಳಿಸಿದರು.ರೈತರು ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ,ಉಳುವವನೆ ಭೂಮಿಯ ಒಡೆಯ ಎಂಬ ದೇಯ್ಯ ವಾಕ್ಯವು ರೈತರಲ್ಲಿ ಸಂತಸಗೊಳಿಸಿರುವುದು ಉಂಟು.
ಆದರೆ ಶಿಡ್ಲಘಟ್ಟದ ರೈತರಿಗೆ ಅರಣ್ಯ ಅಧಿಕಾರಿಗಳು ಸಾಗುವಳಿ ಮಾಡುವ ಭೂಮಿಯನ್ನು ಆಕ್ರಮಿಸಿ ನೋಟಿಸ್ ನೀಡಿರುವ ಬಗ್ಗೆ ಮಾಹಿತಿ ನೀಡದೆ ಭೂಮಿಯನ್ನು ವಶಕ್ಕೆ ಪಡೆದಿರುವುದು ಅನ್ಯಾಯವಾಗಿದೆ ಎಂದು ಸೀಕಲ್ ರಾಮಚಂದ್ರ ಗೌಡ ಕಿಡಿಕಾರಿದರರು.ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಣ್ಣ, ಆನಂದ ಗೌಡ, ವಕೀಲರು ಹರಿಪ್ರಸಾದ್, ದಿಬ್ಬೂರಹಳ್ಳಿ ರಾಜಣ್ಣ, ಕನಕಪ್ರಸಾದ್, ನಟರಾಜ್, ಜಿಲ್ಲಾ ವಕ್ತಾರ ರಮೇಶ್ ಬಾಯರಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!