
ಉದಯವಾಹಿನಿ ಶಿಡ್ಲಘಟ್ಟ: ಮಹಿಳೆಯರ ಭಾಗವಹಿಸುವಿಕೆ ಇಲ್ಲದೇ ಯಾವುದೇ ಕ್ಷೇತ್ರದಲ್ಲೂ ಸುಸ್ಥಿರ ಅಭಿವೃದ್ಧಿಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ಜಿ. ಮುನಿರಾಜು ತಿಳಿಸಿದರು.ತಾಲ್ಲೂಕು ಪಂಚಾಯಿತಿ ಮತ್ತು ಫೌಂಡೇಷನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆ ಸಹಯೋಗದಲ್ಲಿ “ಲಿಂಗ ಸಮಾನತೆ ಮತ್ತು ವೈವಿಧ್ಯತೆ” ತರಬೇತಿ ಕಾರ್ಯಾಗಾರವನ್ನು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹುಟ್ಟತ್ತಾ ಎಲ್ಲರೂ ಕೂಡ ಸಮಾನರೇ, ಭೌತಿಕವಾಗಿ ಕೆಲವೊಂದು ವ್ಯತ್ಯಾಸಗಳಿರಬಹುದು ಅಷ್ಟೇ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿ ತೋರಿಸಿದ್ದಾರೆ, ಆದರೆ ನಾವು ಚಿಕ್ಕ ಮಕ್ಕಳಿನಿಂದಲೇ ಹೆಣ್ಣು ಮತ್ತು ಗಂಡು ಎಂಬ ಬೇದಬಾವಗಳನ್ನು ಬಿತ್ತುತ್ತಾ ಸಮಾಜದಲ್ಲಿ ಲಿಂಗ ಅಸಮಾನತೆಗೆ ಕಾರಣೀಭೂತರಾಗಿ ಆಧುನಿಕ ಯುಗದಲ್ಲೂ ಮೌಢ್ಯತೆಯನ್ನು ಮರೆಯುತ್ತಿದ್ದೇವೆ. ಸಮಾಜದಲ್ಲಿರುವ ಲಿಂಗ ತಾರತಮ್ಯ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಇಂತಹ ತರಬೇತಿ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಿವೆ ಎಂದರು.ಮೂಢನಂಬಿಕೆ ಮತ್ತು ಮೌಡ್ಯತೆಗಳಿಂದ ಹಲವಾರು ವರ್ಷಗಳಿಂದ ಮಹಿಳೆಯರ ಮೇಲೆ ಹಾಕಿರುವ ಸಂಕೋಲೆಗಳನ್ನು ಬಿಡಿಸಕೊಳ್ಳಲು ಮಹಿಳೆಯರೇ ಸಧೃಡರಾಗಿ ಸಬಲರಾಗಬೇಕು ಮತ್ತು ಪುರಷರು ಇದಕ್ಕೆ ಸಹಕಾರವನ್ನು ಕೋಡಬೇಕು ಎಂದು ರಾಜ್ಯ ಮಟ್ಟದ ತರಬೇತಿ ಅಧಿಕಾರಿ ಅಗತಾಶೇಖರ್ ತರಬೇತಿಯನ್ನು ನೀಡಿದರು.
ಯಾವುದೇ ರೀತಿಯ ಬದಲಾವಣೆ ಮತ್ತು ಅಭಿವೃದ್ಧಿಯಾಗಬೇಕಾದರೆ ತಲಮಟ್ಟದಿಂದ ಆದರೆ ಮಾತ್ರ ನಿಜವಾದ ಸುಸ್ಥಿರ ಅಭಿವೃದ್ಧಿಯಾಗಲು ಸಾದ್ಯವಾಗುತ್ತದೆ, ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಲ್ಪಿಸುವ ಮೂಲಕ ಸಮಾಜದಲ್ಲಿರುವ ಲಿಂಗ ತಾರತಮ್ಯ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಕೆಲಸ ಕಾರ್ಯಗಳಿಗೆ ಬುನಾದಿ ಹಾಕುವ ಕೆಲಸಗಳನ್ನು ಪ್ರಾರಂಭಿಸಬೇಕಿದೆ ಎಂದು ಎಫ್ಇಎಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕರಾದ ಎನ್ ರಮೇಶ್ ತಿಳಿಸಿದರು. ಈ ತರಬೇತಿ ಕಾರ್ಯಗಾರದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಜಿ ನರಸಿಂಹಮುರ್ತಿ, ವೆಂಕಟಲಕ್ಮಮ್ಮ, ಸರಸ್ವತಿ, ಸುಶೀಲ, ನಾಗವೇಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕೆ ಎಸ್ ಮಧು, ವೀಣಾ,ಮಹೇಶ್, ಗೋಪಾಲ್, ತನ್ವಿರ್ ಆಹಮದ್, ಎಫ್ಇಎಸ್ ಸಂಸ್ಥೆಯ ಸಂಯೋಜಕರಾದ ಉತ್ತಣ್ಣ, ಲೀಲಾವತಿ ಹಾಗೂ ಪಂಚಾಯಿತಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.
