
ಉದಯವಾಹಿನಿ ಸಿಂಧನೂರು: ಸರಕಾರಿ ಸರ್ವೆ ನಂ. 419 ಹಾಗೂ 186 ಸಿಂಧನೂರು ಗ್ರಾಮದ ಜಮೀನಿನಲ್ಲಿ 5ನೇ ದಿನಕ್ಕೆ ಕಾಲಿಟ್ಟಿದೆ ಎಂದು ಹೇಳಿದರು
ಭೂ ಸಂಘರ್ಷ ಧರಣಿ ಕುರಿತು ಮಾತನಾಡಿದ ಸಿಪಿಐ(ಎಂಎಲ್ ರೆಡ್ ಸ್ಟಾರ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾದ, ಆರ್.ಮಾನಸಯ್ಯ ಅವರು ಎಲ್ಲಾ ಹೋರಾಟಗಳ ತಾಯಿ ಹೋರಾಟ ಅಂದರೇನೆ ಭೂ ಹೋರಾಟ, ಇದು ವರ್ಗ ಹೋರಾಟ. ತೆಲಂಗಾಣ, ತೇಭಾಗ, ನಕ್ಸಲ್ಬರಿ, ಪುನ್ನಪ್ರವಯಲಾರ್ ಸೇರಿದಂತೆ ನಮ್ಮ ರಾಯಚೂರು ಜಿಲ್ಲೆಯ ಚಿಕ್ಕೆಸರೂರು, ಮೆದಿಕಿನಾಳ,ಗೆಜ್ಜಲಗಟ್ಟಾ, ಮಹ್ಮದ್ ನಗರ ಹಾಗೂ ಇತರೆ ಭೂ ಹೋರಾಟಗಳ ಮುಂದುವರಿಕೆಯೇ ಈ ಭೂ ಹೋರಾಟವಾಗಿದೆ.
ಜವಳಗೇರಾ ಬಾರೀ ಭೂಮಾಲೀಕರ ನಾಡಗೌಡರ ಅಕ್ರಮ ಸಾಗುವಳಿಗೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶಿಲ್ದಾರರು ಬೆಂಬಲಿಸುತ್ತಾ 1971ರ ದೇವರಾಜ ಅರಸರ ಭೂ ಸುಧಾರಣೆ ಕಾಯ್ದೆಯನ್ನು ಸಿಂಧನೂರು ತಾಲೂಕಿನಲ್ಲಿ ಸಂಪೂರ್ಣ ಬುಡಮೇಲು ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಂದಾಯ ಸಚಿವರು ಈ ಹೋರಾಟದ ಕಡೆ ಗಮನ ಹರಿಸಬೇಕು. ಕಂದಾಯ ಸಚಿವರು ಜಿಲ್ಲಾಧಿಕಾರಿಗಳ ಸಭೆ ನಡೆಸಿ ಸಾಗುವಳಿ ಮಾಡುತ್ತಿರುವ ಭೂಹೀನ ಬಡವರಿಗೆ ಭೂಮಿ ವಿತರಿಸಬೇಕು. ಸರಕಾರಿ ಭೂಮಿ ಅಕ್ರಮ ಭೂ ಕಬಳಿಕೆಯನ್ನು ಕೂಡಲೇ ತೆರವುಗೊಳಿಸಿ ಭೂಹೀನ ಜನರಿಗೆ ಹಂಚಬೇಕೆಂದು ಹೇಳಿದ್ದಾರೆ, ಆದರೆ ಇಲ್ಲಿನ ತಾಲೂಕಾಡಳಿತ-ಜಿಲ್ಲಾಡಾಳಿತ ಏನು ಮಾಡುತ್ತಿದೆ…? ಕೂಡಲೇ ಅರ್ಜಿ ಸಲ್ಲಿಸಿದ ಜನರ ಸಾಗುವಳಿಗೆ ಸೂಕ್ತ ರಕ್ಷಣೆ ನೀಡಿ ಭೂ ಪಟ್ಟ ವಿತರಿಸಬೇಕೆಂದು.
ಸದರಿ ಭೂ ಹೋರಾಟಕ್ಕೆ ನಿಜವಾದ ರೈತ ಸಂಘ, ನಿಜವಾದ ದಲಿತಪರ ಸಂಘ, ನಿಜವಾದ ಕಾರ್ಮಿಕ, ನಿಜವಾದ ಪ್ರಗತಿಪರ ಸಂಘಟನೆಗಳು ಭೂಮಿಗಾಗಿ ನಡೆಯುತ್ತಿರುವ ಹಗಲು-ರಾತ್ರಿ ಭೂ ಹೋರಾಟಕ್ಕೆ ಬೆಂಬಲಿಸಬೇಕೆಂದು ಹೇಳಿದರು. ಹಾಗೆಯೇ ನಾಳೆ ಸಿಪಿಐ(ಎಂಎಲ್)ರೆಡ್ ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ-AIKKS ಸಭೆ ನಡೆಸಿ ಮುಂದಿನ ಹೋರಾಟವನ್ನು ಪ್ರಕಟಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ ಎಂ.ಡಿ.ಅಮೀರ ಅಲಿ, ಎಂ.ಗಂಗಾಧರ,ಮಾಬುಸಾಬ ಬೆಳ್ಳಟ್ಟಿ, ಅಜೀಜ್ ಜಾಗೀರದಾರ, ಕರ್ನಾಟಕ ರೈತ ಸಂಘ-AIKKS ನ ಸಂತೋಷ ಹಿರೇದಿನ್ನಿ,ಆದೇಶ ನಗನೂರು, ಅಂಬಮ್ಮ ಬಸಾಪೂರ, ಹಂಪಮ್ಮ, ಉಷಾ, ಚೈತ್ರಾ, ರೇಣುಕಮ್ಮ, ಸುಮಂಗಲಾ, ರುಕ್ಮಿಣೇಮ್ಮಾ, ಜಗಧೀಶ್ವರಿ, ಗಂಗಮ್ಮ,ಹೆಚ್.ಆರ್.ಹೊಸಮನಿ,ಮುದಿಯಪ್ಪ, ಹುಲುಗಪ್ಪ ಬಳ್ಳಾರಿ,ಭಾಷಾ, ಲಕ್ಷ್ಮೀ, ದೇವಮ್ಮ, ಜುಲೇಖಾಬೇಗಂ,ಸಂಗಮ್ಮಾ,ಭಿಬೀ ಪಾತಿಮಾ ಸೇರಿದಂತೆ ಭೂಹೀನ ಅರ್ಜಿದಾರರು ಹಾಗೂ ಇತರೆ ನೂರಾರು ಜನರು ಭೂ ಸಂಘರ್ಷ ಹೋರಾಟದಲ್ಲಿ ಪಾಲ್ಗೊಂಡಿದ್ದರು.
