ಉದಯವಾಹಿನಿ ಸಿಂಧನೂರು: ಭಾರತ ದೇಶ ಇಷ್ಟು ಸುಭದ್ರವಾಗಿದೆ ಎಂದರೆ ಅದಕ್ಕೆ ಮಹಾತ್ಮ ಗಾಂಧೀಜಿಯವರ ಕೊಡುಗೆ ಅಪಾರ. ಸರ್ವ ಜನಾಂಗದವರನ್ನು ಒಗ್ಗೂಡಿಸಿಕೊಂಡು ಹೋರಾಡಿದರು.ಶಾಂತಿಯನ್ನು ಬಯಸಿ ಶಾಂತಿಯಿಂದ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ,ಆ ನಿಟ್ಟಿನಲ್ಲಿ ಮಹಾತ್ಮ ಗಾಂಧಿಜೀ ಯವರನ್ನು ಎಲ್ಲರು ಗೌರವಿಸಬೇಕಾಗಿದೆ , ಕವಿ ಕವಿಯತ್ರಿಯರು ಗಾಂಧಿಯವರ ಬದುಕು ಬರಹ ಕುರಿತು ಸ್ವರಚಿತ ಕವನ ವಾಚನ ಮಾಡಿದ್ದು ವಿಶೇಷ ಎಂದು ಅಭಿಪ್ರಾಯಪಟ್ಟರು.ಅವರು ದಿನಾಂಕ 9.10.2023 ಗಾಂಧಿನಗರದ ಶ್ರೀ ಕನಕದಾಸ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಹಾಗೂ ಗಾಂಧೀನಗರದಲ್ಲಿ ಗಾಂಧಿ ಕವಿಗೋಷ್ಠಿಯನ್ನು ಶಿಕ್ಷಕರಾದ ವೀರೇಶ್ ಗೋನವಾರ ಅವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶರಣ ಶ್ರೀ ನೀಲಕಂಠಗೌಡ ಪಾಟೀಲ ಗೋರೆಬಾಳ.ಹಾಗೂ ಶ್ರೀ ಬಸಪ್ಪ ನಾಗಪ್ಪ ತುಕ್ಕಾಯಿ ಸ್ಮಾರಕ ದತ್ತಿ ಉಪನ್ಯಾಸವನ್ನು ಮಹಾದೇವಪ್ಪ ಗೋರೆಬಾಳ ಶರಣ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬದುಕು ಬರಹ ಹಾಗೂ ಅವರ ವ್ಯಕ್ತಿತ್ವ ಕುರಿತು ಸ್ವರಚಿತ ಕವನವನ್ನು ಹಿರಿಯ ಕವಿ ಎಂ ಸಂಗಪ್ಪ ಬಳ್ಳಾರಿ. ಕಾರಟಗಿಯ ಸಂಶೋಧಕ ಶ್ರೀ ವೀರುಪಾಕ್ಷೇಶ್ವರಸ್ವಾಮಿ ಹಿರೇಮಠ ಮುಕೇಶ್ ಭೋಗಾಪೂರ, ಚೈತ್ರಾ ಗಾಂಧಿನಗರ, ಬಸವರಾಜ,‌ ಶರಣಬಸವ,‌ ಹುಸೇನಬೀ, ತಿರುಮಲೇಶ, ಪಾರ್ವತಮ್ಮ, ಶಾಂಭವಿ, ಅನುಷ್ಯ, ಅಕ್ಷತಾ, ಪ್ರಿಯಾಂಕಾ, ನಿರುಪಾದಿ, ಮತ್ತಿತರರು ಕವನ ವಾಚನ ಮಾಡಿದರು.‌ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಕವಿ ಶ್ರೀ ಅಯ್ಯಪ್ಪ ಮೇಟಿ ಶಿಕ್ಷಕರು, ಈ ದೇಶಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯ ಕೊಡುಗೆ ಅಪಾರ ಆ ನಿಟ್ಟಿನಲ್ಲಿ ಕವಿಗಳು ತಮ್ಮ ಕವನಗಳ ಮೂಲಕ ಗಾಂಧೀಜಿಯವರಿಗೆ ಗೌರವ ಸಲ್ಲಿಸಿದ್ದಿರಿ, ಕವಿಗಳು ದೇಶ ಭಾಷೆ ನಾಡು ನುಡಿ ನೆಲ ಜಲ ಹಾಗೂ ಭಾವೈಕ್ಯತೆಯ ಕುರಿತು ಸೃಜನಶೀಲತೆ ಹಾಗೂ ಮೌಲ್ಯ ಇರುವ ಕವನಗಳು ರಚನೆ ಮಾಡಬೇಕು ಎಂದು ಕವಿ ಕವಿಯತ್ರಿಯರಿಗೆ ಕಿವಿ ಮಾತು ಹೇಳಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ ಪೂ ವೀರಭದ್ರ ಶರಣರು ತಲೇಖಾನ ಹಿರೇಮಠ ಕಾರಟಗಿ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಕೃಷ್ಣ ಪ್ರಾಚಾರ್ಯರು.‌ನಿಜಗುಣ ಹಡಪದ. ಉಪನ್ಯಾಸಕ ಲಿಂಗಪ್ಪ ಬನ್ನದ. ಕೆ ನಾಗೇಶ ಗಾಂಧಿನಗರ. ಯಂಕಪ್ಪ ಹಿರೇಕುರಬರ ಗಾಂಧಿನಗರ. ಶ್ರೀಮತಿ ಬಸಮ್ಮ ನಾಯಕ ಸಿಂಧನೂರು. ಶ್ರೀ ಮತಿ ಲಲಿತಾ ಗಾಂಧಿನಗರ. ಉಪನ್ಯಾಸಕ ಶರತ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಪಯ್ಯಸ್ವಾಮಿ ಸಾಲಿಮಠ ವಹಿಸಿದ್ದರು. ಪ್ರಾರ್ಥನೆಯನ್ನು ಗುಂಡುರಾವ್ ಚನ್ನಳ್ಳಿ ಮಾಡಿದರೆ ಶ್ರೀ ರಾಮದಾಸ ಶಿಕ್ಷಕರು ಸ್ವಾಗತಿಸಿದರು. ಶ್ರೀ ಮತಿ ಸಂಗೀತ ಸಾರಂಗಮಠ ಕಾರ್ಯಕ್ರಮದ ನಿರೂಪಣೆ ಮಾಡಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!