
ಉದಯವಾಹಿನಿ ಬೆಂಗಳೂರು : ಫುಯೆಲ್ ಸಂಸ್ಥಾಪನಾ ದಿನಾಚರಣೆಯಲ್ಲಿ 90 ಅರ್ಹ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮ. ಅಕ್ಟೋಬರ್ 10,2023: ಕೌಶಲ್ಯ ಶಿಕ್ಷಣ, ವೃತ್ತಿಪರ ತರಬೇತಿ ಮತ್ತು ಉದ್ಯೋಗದ ಬೆಂಬಲದ ಮೂಲಕ ಸಮಾಜದ ಹಿಂದುಳಿದ ಸಮುದಾಯದ ಯುವಕರನ್ನು ಸಬಲೀಕರಣಗೊಳಿಸಲು ಮೀಸಲಾಗಿರುವ ಲಾಭರಹಿತ ಸಂಸ್ಥೆ ಫುಯೆಲ್(ಫ್ರೆಂಡ್ಸ್ ಯೂನಿಯನ್ ಫಾರ್ ಎನರ್ಜೈಸಿಂಗ್ ಲೈವ್ಸ್) 17ನೇ ಸಂಸ್ಥಾಪನಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು. ಈ ವಿಶೇಷ ದಿನದಂದು 90 ಬಡ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ವಿತರಿಸುವ ಮೂಲಕ ಫುಯೆಲ್ ಜನರ ಜೀವನವನ್ನು ಸುಧಾರಿಸುವ ತನ್ನ ಬದ್ಧತೆಯನ್ನು ಪುನರುಚ್ಛರಿಸಿತು.ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳಾದ ಕೌಶಲ್ಯ ಅಭಿವೃದ್ಧಿ, ವೃತ್ತಿಪರ ತರಬೇತಿ ಮತ್ತು ಸ್ಕಾಲರ್ಶಿಪ್, ಉದ್ಯೋಗವಕಾಶಗಳನ್ನು ನೀಡುತ್ತಿರುವ ಫುಯೆಲ್ ಸಂಸ್ಥೆ ಇತರ ಸಂಸ್ಥೆಗಳಿಗೂ ಆದರ್ಶವೆನಿಸುವಂತೆ ಸಂಸ್ಥಾಪನಾ ದಿನ ಆಚರಿಸಿತು. ಈ ಸಮಾರಂಭ ಪ್ರಮುಖ ಗಣ್ಯರು, ನೀತಿ ನಿರೂಪಕರು, ಉದ್ಯಮಿಗಳು ಹಾಗೂ ಸರ್ಕಾರಿ ಪ್ರತಿನಿಧಿಗಳ ಒಗ್ಗೂಡುವಿಕೆಗೆ ಸಾಕ್ಷಿಯಾಯಿತು.ಈ ಸಮಾರಂಭದ ಪ್ರಮುಖ ಅಂಶವೆಂದರೆ ಭವಿಷ್ಯದ ಕೌಶಲ್ಯ ಶೃಂಗಸಭೆ. ಈ ಶೃಂಗಸಭೆಯಲ್ಲಿ ಹೆಸರಾಂತ ಉದ್ಯಮಿಗಳು ಮತ್ತು ನೀತಿ ನಿರೂಪಕರು ಭಾಗವಹಿಸಿದ್ದರು. ಭವಿಷ್ಯದ ಪ್ರತಿಭೆಗಳು, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಸಿಎಸ್ ಆರ್ ನ ನಾವೀನ್ಯತೆಯನ್ನು ಪರಿಶೀಲಿಸಿತು. ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್, ಸಮಾಜ ಸೇವಕ ಮತ್ತು ಬಿಎಂಸಿ ಕಾರ್ಪೋರೇಟರ್ ಹರ್ಷಿತಾ ನಾರ್ವೇಕರ್, ಹಿಟಾಚಿ ಏರ್ ಕಂಡೀಷನಿಂಗ್ ಇಂಡಿಯಾ ಉಪಾಧ್ಯಕ್ಷ ಕರ್ನಲ್ ರಾಜೇಶ್ ಓಹೋಲ್, ಕಾರ್ಪೋರೇಟ್ ಕಮ್ಯುನಿಕೇಶನ್ಸ್ ಬಜಾಜ್ ಗ್ರೂಪ್ ಉಪಾಧ್ಯಕ್ಷ ಸಂಜಯ್ ಓಜಾ, ಇಂಟರ್ನ್ಯಾಶನಲ್ ಬ್ಯುಸಿನೆಸ್ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನಿರ್ದೇಶಕ ಪರಾಗ್ ದೇಶಮುಖ್ , ಎಲ್ ಟಿಐ ಮೈಂಡ್ ಟ್ರೀ ಚೀಫ್ ಸಸ್ಟೈನೆಬಿಲಿಟಿ ಆಫೀಸರ್ ಪನೀಶ್ ರಾವ್, ಫುಯೆಲ್ ಮತ್ತು ಫುಯೆಲ್ ಬ್ಯುಸಿನೆಸ್ ಸ್ಕೂಲ್ (ಎಫ್ ಬಿ ಎಸ್) ಸಂಸ್ಥಾಪಕ ಮತ್ತು ಅಧ್ಯಕ್ಷ ಕೇತನ್ ದೇಶಪಾಂಡೆ ಹಾಗೂ ಫುಯೆಲ್ ಮುಖ್ಯ ಮಾರ್ಗದರ್ಶಕ ಸಂತೋಷ್ ಹುರಲಿಕೊಪ್ಪಿ ಉಪಸ್ಥಿತರಿದ್ದರು.
