ಉದಯವಾಹಿನಿ, ನ್ಯೂಯಾರ್ಕ್: ಹಮಾಸ್ ಉಗ್ರರ ದಾಳಿಗೆ ಮಿಲಿಟರಿ ಪ್ರತಿಕ್ರಿಯೆಯ ಸಂದರ್ಭ ಅಂತಾರಾಷ್ಟ್ರೀಯ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಇಸ್ರೇಲ್ ಅಧಿಕಾರಿಗಳು ಖಚಿತಪಡಿಸಬೇಕು. ಭಯೋತ್ಪಾದನೆಯ ಕೃತ್ಯ, ನಾಗರಿಕರ ಹತ್ಯೆ, ಅಪಹರಣ, ಚಿತ್ರಹಿಂಸೆಯ ಕೃತ್ಯಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ತಿಳಿಸಿದ್ದಾರೆ.ಗಾಝಾದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಲು ಕರೆಯಲಾದ ವಿಶ್ವಸಂಸ್ಥೆಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ರಕ್ತಪಾತ, ದ್ವೇಷ ಮತ್ತು ಧ್ರುವೀಕರಣದ ಈ ವಿಷವರ್ತುಲವನ್ನು ಕೊನೆಗೊಳಿಸಬೇಕು. ಗಾಝಾಕ್ಕೆ ಎಲ್ಲಾ ಆಹಾರ ಮತ್ತು ಇತರ ಅಗತ್ಯ ಪೂರೈಕೆಗಳನ್ನು ನಿರ್ಬಂಧಿಸಿ ಸಂಪೂರ್ಣ ಮುತ್ತಿಗೆ ಹೇರುವ ಇಸ್ರೇಲ್ ನ ಪ್ರತಿಜ್ಞೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಅವರು, ಹಮಾಸ್ ಉಗ್ರರ ದಾಳಿಗೆ ಮಿಲಿಟರಿ ಪ್ರತಿಕ್ರಿಯೆಯ ಸಂದರ್ಭ ಅಂತಾರಾಷ್ಟ್ರೀಯ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಇಸ್ರೇಲ್ ಅಧಿಕಾರಿಗಳು ಖಚಿತಪಡಿಸಬೇಕು. ಭಯೋತ್ಪಾದನೆಯ ಕೃತ್ಯ, ನಾಗರಿಕರ ಹತ್ಯೆ, ಅಪಹರಣ, ಚಿತ್ರಹಿಂಸೆಯ ಕೃತ್ಯಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಗುಟೆರಸ್ ಹೇಳಿದ್ದು, ದಾಳಿಯನ್ನು ತಕ್ಷಣ ನಿಲ್ಲಿಸಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು. ಹಿಂಸಾಚಾರವು ಶೂನ್ಯದಿಂದ ಸೃಷ್ಟಿಯಾಗಿಲ್ಲ. ೫೬ ವರ್ಷಗಳಿಂದ ಮುಂದುವರಿದಿರುವ ಸ್ವಾಧೀನತೆ, ರಾಜಕೀಯ ಪರಿಹಾರ ಗೋಚರಿಸದ ದೀರ್ಘಾವಧಿಯ ಬಿಕ್ಕಟ್ಟಿನಿಂದ ಸ್ಫೋಟಗೊಂಡಿದೆ.
