ಉದಯವಾಹಿನಿ, ನ್ಯೂಯಾರ್ಕ್ : ಆಸ್ಕರ್ ಟ್ರೋಫಿಯನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳುವುದು ಇತಿಹಾಸವನ್ನು ಸೃಷ್ಟಿಸಿದಂತೆ. ಸಿನಿಮಾ ಜಗತ್ತಿನಲ್ಲಿ ಅಕಾಡೆಮಿ ಪ್ರಶಸ್ತಿಗೆ ಸಾಕಷ್ಟು ಅರ್ಥವಿದೆ. ಅದನ್ನು ಗೆಲ್ಲಲು ಅಭಿನಯದ ತಪಸ್ಸು ಮಾಡಬೇಕು.ಅದನ್ನು ಗೆಲ್ಲುವುದು ನಟ-ನಟಿಯರ ಜೀವಿತಾವಧಿ ಕನಸು.ಆದರೆ ಒಬ್ಬ ನಟ ಅಥವಾ ನಟಿ ಈ ಆಸ್ಕರ್ ಟ್ರೋಫಿಯನ್ನು ಗೆದ್ದ ನಂತರ ಈ ಟ್ರೋಫಿಯನ್ನು ಡೋರ್ ಸ್ಟಾಪರ್ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದರೆ ಅದಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ.ಆದರೆ ಹಾಲಿವುಡ್ ನಟಿ ಗ್ವಿನೆತ್ ಪಾಲ್ಟ್ರೋ ಈ ಕೆಲಸ ಮಾಡಿದ್ದಾರೆ.ಅಂದರೆ ತಮಗೆ ದೊರೆತ ಅಕಾಡೆಮಿ ಪ್ರಶಸ್ತಿಯನ್ನು ಡೋರ್ ಸ್ಟಾಪರ್ ಆಗಿ ಬಳಸಿದ್ದಾರೆ.ಈ ಬಗ್ಗೆ ಅವರೇ ಹೇಳಿದ್ದು, ಸಾಕಷ್ಟು ಟೀಕೆಗಳ ನಂತರ ಅವರೇ ಸ್ಪಷ್ಟನೆಯನ್ನೂ ನೀಡಿದ್ದಾರೆ.ಹಾಲಿವುಡ್ ನಟಿ ಗ್ವಿನೆತ್ ಪಾಲ್ಟ್ರೋ ೫೧ ವರ್ಷದ ನಟಿ ಇತ್ತೀಚಿನ ಸಂದರ್ಶನದಲ್ಲಿ ಅವರು ತಮ್ಮ ಹ್ಯಾಂಪ್ಟನ್ ಮನೆಯಲ್ಲಿ ಚಿನ್ನದ ಪ್ರತಿಮೆಯನ್ನು (ಆಸ್ಕರ್ ಟ್ರೋಫಿ) ಡೋರ್ ಸ್ಟಾಪರ್ ಆಗಿ ಬಳಸುತ್ತೇನೆ ಎಂದು ಹೇಳಿದರು. ಗ್ವಿನೆತ್ ತನ್ನ ೧೯೯೯ ರ ಚಲನಚಿತ್ರ ಷೇಕ್ಸ್‌ಪಿಯರ್ ಇನ್ ಲವ್ ಗಾಗಿ ತನ್ನ ಮೊದಲ ನಾಮನಿರ್ದೇಶನದಲ್ಲಿ ಅತ್ಯುತ್ತಮ ನಟಿಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡರು.
ವೈರಲ್ ವೀಡಿಯೊದಲ್ಲಿ, ಗ್ವಿನೆತ್ ಪಾಲ್ಟ್ರೋ ತನ್ನ ಮನೆಯ ಉದ್ಯಾನದಲ್ಲಿ ನಡೆಯುತ್ತಿದ್ದು ಮತ್ತು ನಂತರ ಸಂದರ್ಶಕನು ಆಸ್ಕರ್ ಟ್ರೋಫಿಯನ್ನು ಬಾಗಿಲಿನ ಬಳಿ ನೆಲದ ಮೇಲೆ ಇರುವ ಕಡೆಗೆ ಕ್ಯಾಮೆರಾವನ್ನು ತಿರುಗಿಸಿ ಎಂತಹ ಸುಂದರ ಅಕಾಡೆಮಿ ಪ್ರಶಸ್ತಿ ಎಂದಾಗ ಆಗ ನಟಿ ತಿರುಗಿ, ಇದು ನನ್ನ ಡೋರ್ ಸ್ಟಾಪರ್ ಎಂದು ಉತ್ತರಿಸುತ್ತಾಳೆ.
ಈ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಟಿ ಅನೇಕ
ಟೀಕೆಗಳನ್ನು ಎದುರಿಸಬೇಕಾಯಿತ್ತು.ಈ ಕುರಿತು ನಂತರ ಸ್ಪಷ್ಟನೆ ನೀಡಿದ ನಟಿ ಗ್ವಿನೆತ್ ಖಂಡಿತವಾಗಿಯೂ ಇದು ಕೇವಲ ತಮಾಷೆಯೇ ಹೇಳಿದ ಹೇಳಿಕೆ ಹೊರತು ನಿಜವಲ್ಲ ಸ್ಪಷ್ಟನೆ ನೀಡಿದ್ದಾರೆ.
