ಉದಯವಾಹಿನಿ, ಮೆಕ್ಸಿಕೋ : ಪ್ರಪಂಚದಾದ್ಯಂತ ಫುಟ್ಬಾಲ್ ಅಭಿಮಾನಿಗಳ ಕೊರತೆ ಇಲ್ಲ. ಪಂದ್ಯ ವೀಕ್ಷಿಸಲು ಟಿವಿಗೆ ಸದಾ ಟಿವಿಗೆ ಅಂಟಿಕೊಂಡಿರುತ್ತಾರೆ.ಅನೇಕ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಆಟವನ್ನು ಕಣ್ಣಾರೆ ಕಾಣಲು ಮೈದಾನಕ್ಕೆ ಬಂದು ಆಟವನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇದೆಲ್ಲಾ ಸಹಜ.ಆದರೆ ಮೈದಾನದಲ್ಲಿ ಆಟಗಾರರ ನಡುವೆ ನಾಯಿಯೊಂದು ಆಡುವುದು ನೀವು ಎಂದಾದರೂ ನೋಡಿದ್ದೀರಾ? ನೀವು ಇದನ್ನು ನೋಡದೇ ಇರಬಹುದು, ಆದರೆ ಇತ್ತೀಚಿನ ದಿನಗಳಲ್ಲಿ ಅಂತಹುದೇ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಕಂಡುಬಂದಿದೆ. ಇದರಲ್ಲಿ ನಾಯಿಯೊಂದು ಆಟಗಾರರನ್ನು ಮೈದಾನ ತುಂಬಾ ಕುಣಿಯುವಂತೆ ಮಾಡುತ್ತಿದೆ.ವೈರಲ್ ಆದ ದೃಶ್ಯದಲ್ಲಿ ಎಂಬ ಈ ನಾಯಿ ಮೆಕ್ಸಿಕೋದ ಫುಟ್ಬಾಲ್ ಮೈದಾನಕ್ಕೆ ಪ್ರವೇಶಿಸುವ ಮೂಲಕ ಆಟಗಾರರಲ್ಲಿ ಮತ್ತು ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದೆ.ಅಲ್ಲದೇ ಇಡೀ ಮೈದಾನವನ್ನು ಸ್ವಾಧೀನಪಡಿಸಿಕೊಂಡದ್ದು ಮಾತ್ರವಲ್ಲದೆ ಚೆಂಡನ್ನು ಕದ್ದಿದೆ. ಈ ಇಡೀ ಘಟನೆ ತುಂಬಾ ತಮಾಷೆಯಾಗಿ ತೋರುವುದು. ವೀಡಿಯೊದ ಆರಂಭದಲ್ಲಿ, ನಾಯಿಯು ವೇಗವಾಗಿ ಓಡುತ್ತಾ ಮೈದಾನ ಪ್ರವೇಶಿಸುವುದನ್ನು ಕಾಣಬಹುದು. ಆಟದಲ್ಲಿ ತೊಡಗಿದ ಆಟಗಾರರು ಪಂದ್ಯದ ಮಧ್ಯದಲ್ಲಿ ನಾಯಿಯನ್ನು ಕಂಡರೂ ತಮ್ಮ ಆಟವನ್ನು ಮುಂದುವರಿಸುತ್ತಾರೆ. ಆದರೆ ನಾಯಿ ಅವರಿಂದ ಚೆಂಡನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತದೆ. ನಂತರ ಒಬ್ಬ ಆಟಗಾರ ಚೆಂಡು ನೀಡುತ್ತಾನೆ ತಕ್ಷಣ ಚೆಂಡನ್ನು ತನ್ನ ಬಾಯಿಯಲ್ಲಿ ಹಿಡಿದ ನಾಯಿ ಯಾರ ಕೈಗೂ ಸಿಗದೇ ಮೈದಾನ ತುಂಬಾ ಓಡಾಡುವುದನ್ನು ಕಾಣಬಹುದು.
