ಉದಯವಾಹಿನಿ, ದೇವದುರ್ಗ :- ಬರಗಾಲ ಹಿನ್ನೆಲೆ ಕೂಲಿಕಾರರಿಗೆ 200ದಿನಗಳ ಕೆಲಸ 600ಕೂಲಿ ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ಜಾಲಹಳ್ಳಿ, ಅಮರಾಪೂರ, ಚಿಂಚೋಡಿ, ಗಲಗ,ಪಲಕನಮರಡಿ,ಮಸರಕಲ್, ಆಲ್ಕೋಡ್ ಗ್ರಾಮ ಪಂಚಾಯತಿಗಳಲ್ಲಿ ಬುಧವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯಿಂದ ಪ್ರತಿಭಟನಾ ಮುಖಾಂತರ ಮನವಿ ಸಲ್ಲಿಸಿ ಒತ್ತಾಯಿಸಿದರು.ರಾಜ್ಯ ಸಮಿತಿಯ ಕರೆಯ ಮೇರೆಗೆ ರಾಜ್ಯಾದ್ಯಂತ ಎಲ್ಲಾ ಗ್ರಾಮ ಪಂಚಾಯತಿಗಳ ಮುಂದೆ ಕೃಷಿ ಕೂಲಿಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಪ್ರಮುಖ ಬೇಡಿಕೆಗಳಾದ ಬರಕ್ಕೆ ತುತ್ತಾಗಿರುವ ಕೃಷಿ ಕೂಲಿಕಾರರಿಗೆ ತಕ್ಷಣ ನರೇಗಾ ಅಡಿಯಲ್ಲಿ ಕೆಲಸ ನೀಡಬೇಕು,ಬಾಕಿ ಉಳಿಸಿಕೊಂಡಿರುವ ಕೂಲಿ ಹಣ ಪಾವತಿಸಬೇಕು, ಗುತ್ತಿಗೆದಾರರು, ಯಂತ್ರಗಳಿಂದ ಹಾವಳಿ ತಪ್ಪಿಸಿ ನರೇಗಾ ಅನುಷ್ಠಾನ ಮಾಡಬೇಕು, ಕೂಲಿಕಾರರ ಬಯಸುವ ವೇಳೆಯಲ್ಲಿ ಕೆಲಸ ಕಲ್ಪಿಸಬೇಕು, ಮಹಿಳೆಯರು, ಅಂಗವಿಕಲರು,60ವರ್ಷ ಮೇಲ್ಪಟ್ಟವರಿಗೆ ಅರಣ್ಯೀಕರಣದಲ್ಲಿ ನರ್ಸರಿ ಮಾಡುವಂತ ಗಿಡಗಳಿಗೆ ನೀರು ಹಾಕುವಂತ ಕೆಲಸಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಜಾಲಹಳ್ಳಿ ಪಂಚಾಯತಿ ಸುರೇಶ್ ಗೌಡ,ಅಯ್ಯಣ್ಣ,ಆನಂದ, ಶಾಂತಕುಮಾರ್, ಗಲಗ ಪಂಚಾಯತಿ ಹನುಮಂತ್ರಾಯ ನಾಯಕ,ಕಾಸಿಮ್, ಚನ್ನಬಸವ, ಅಮರಾಪೂರ ಪಂಚಾಯತಿ ಬಸವರಾಜ,ಶಿವರಾಜ್ ಅಯ್ಯಣ್ಣ,ಅಲಿಸಾಬ್,ಚಿಂಚೋಡಿ ಪಂಚಾಯತಿ ದುರುಗಣ್ಣ, ಶಿವಗುಂಡ,ಮಾಳಿಂಗರಾಯ,ಶಿವರಾಜ್,ಪಾರ್ವತಿ,ದುರುಗಮ್ಮ,ಮುದುಕಮ್ಮ, ಮಸರಕಲ್ ಪಂಚಾಯತಿ ಗಂಗಾಧರ, ಮಹಾಂತೇಶ್, ಪಲಕನಮರಡಿ ಪಂಚಾಯತಿ ಶಿವನಗೌಡ ನಾಯಕ ,ತಿಮ್ಮಣ್ಣ, ವಿಜಯ,ಭೀಮೇಶ್,ಮಹೇಶ್ ಹನುಮಂತ ಇದ್ದರು.

Leave a Reply

Your email address will not be published. Required fields are marked *

error: Content is protected !!