???????

ಉದಯವಾಹಿನಿ,ಹೊಸಕೋಟೆ : ಒಕ್ಕಲಿಗರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹಳ್ಳಿಗಳಲ್ಲಿ ನೆಲೆಸಿದ್ದರು. ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಹಳ್ಳಿ ತೊರೆದು ನಗರ ಪ್ರದೇಶಕ್ಕೆ ಬರುತಿದ್ದು, ಸಮಾಜದಲ್ಲಿಉನ್ನತ ಸಾಧನೆಗೆ ಶಿಕ್ಷಣ ಅತಿ ಮುಖ್ಯವಾಗಿದ್ದು, ಮಕ್ಕಳು ಉತ್ತಮ ಸಂಸ್ಕಾರವ0ತ ಶಿಕ್ಷಣ ಪಡೆದು ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಬೇಕುಎಂದು ಸಂಸದ ಬಿ.ಎನ್. ಬಚ್ಚೇಗೌಡ ತಿಳಿಸಿದರು.ನಗರದ ಪಟೇಲ್ ನಾರಾಯಣಗೌಡಕಲ್ಯಾಣ ಮಂಟಪದಲ್ಲಿ ಹೊಸಕೋಟೆಟೌನ್‌ಒಕ್ಕಲಿಗರ ಸಂಘದ ವತಿಯಿಂದ 2022-23ನೇ ಸಾಲಿನ ಪ್ರತಿಭಾ ಪುರಸ್ಕಾರಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಹಿಂದೆ ಖಡ್ಗಗಳನ್ನು ಹಿಡಿದುಯುದ್ದ ಮಾಡಿ ಪ್ರಪಂಚವನ್ನುಜಯಿಸಬೇಕಿತ್ತು, ವಿದ್ಯೆ ಕಲಿತರೆ ಇಡೀ ಪ್ರಪಂಚವನ್ನು ಆಳುವ ಶಕ್ತಿ ದೊರೆಯುತ್ತದೆ. ವಿದ್ಯೆ, ಬುದ್ದಿ ಹಾಗೂ ಸಂಸ್ಕಾರ ಬಹಳ ಮುಖ್ಯವಾಗಿದೆ. ರಾಜ್ಯದಲ್ಲಿಒಕ್ಕಲಿಗರಿಗೆ ಶೇಕಡ 2ರಷ್ಟು ಮಾತ್ರ ಮೀಸಲಾತಿ ಸಿಕ್ಕಿದ್ದು, ಒಕ್ಕಲಿಗರ ಮಕ್ಕಳ ಶೈಕ್ಷಣಿಕ ಪ್ರಗತಿಗೆಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿ ಅವಶ್ಯಕತೆಯಿದೆ ಎಂದರು.ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಅರಳೆಮಾಕನಹಳ್ಳಿಯಲ್ಲಿ ಒಕ್ಕಲಿಗರ ಸಂಘಕ್ಕೆ 3.5 ಎಕರೆ ಜಮೀನು ಖರೀದಿಸಿದ್ದು, ಸಮುದಾಯ ಭವನ, ವಸತಿ ಶಾಲೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಈ ಬಾರಿ ಕೆಂಪೇಗೌಡ ಜಯ೦ತಿಯನ್ನು ಸರಳವಾಗಿ ಆಚರಿಸಲಾಯಿತು ಎಂದರು.ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದ 55 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಲ್ಯಾಪ್‌ಟಾಪ್ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ.ನಾಗರಾಜ್, ಎಲ್‌ಜಿ ಪೌಂಡೇಷನ್‌ ಅಧ್ಯಕ್ಷ ಲಕ್ಷ್ಮಣ್‌ಗೌಡ, ಉದ್ಯಮಿ ಬಿ.ವಿ.ಬೈರೇಗೌಡ, ಉಮಾ ಬಚ್ಚೇಗೌಡ, ಪ್ರತಿಭಾ ಶರತ್‌ಬಚ್ಚೇಗೌಡ, ಮುಖಂಡರಾದ ಬಚ್ಚಣ್ಣ, ನಟರಾಜ್, ಮುನೇಗೌಡ, ಸಿ.ಆರ್.ಗೌಡ, ನಂಜು೦ಡೇಗೌಡ ಹಾಗೂ ಜನಾಂಗದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!