
ಉದಯವಾಹಿನಿ,ಚಿಂಚೋಳಿ: ಸರ್ಕಾರದಿಂದ ಬಡವರಿಗೆ ದೊರಕಬೇಕಾದ ಅನೇಕ ಯೋಜನೆಗಳು ದೊರಕದೆ ಕೆಲವು ದುಷ್ಟ ಶಕ್ತಿಗಳ ಹಾಗೂ ಸ್ವಾರ್ಥ ವ್ಯಕ್ತಿಗಳು ಕಬಳಿಸಿಕೊಳ್ಳುತ್ತಿದ್ದಾರೆ ಎಂದು ದಲಿತ ಸೇನೆ ತಾಲ್ಲೂಕಾಧ್ಯಕ್ಷ ರಾಘವೇಂದ್ರ ಎಸ್.ಹೂವಿನಭಾವಿ ಆರೋಪಿಸಿದ್ದರು. ಪಟ್ಟಣದ ಚಂದಾಪೂರದ ತಾಲ್ಲೂಕಾ ಪಂಚಾಯತ್ ಕಾರ್ಯಾಲಯ ಎದುರು ತಾಲ್ಲೂಕು ದಲಿತ ಸೇನೆ ಸಮಿತಿ ವತಿಯಿಂದ ತಾಲ್ಲೂಕಿನ ವಿವಿಧ ಬೇಡಿಕೆಗಳು ಈಡೇರಿಸವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,ನರೇಗಾ ಯೋಜನೆ ದುಷ್ಟ ಶಕ್ತಿಗಳ ಪಾಲಾಗುತ್ತಿದೆ. ನರೇಗಾ ಕೆಲಸವು ನಿಜವಾದ ಕೂಲಿಕಾರ್ಮಿಕರಿಗೆ ಕೆಲಸ ದೊರಕದೆ ಕೆಲವರು ಮನೆಯಲ್ಲಿಯೇ ಇದ್ದುಕೊಂಡವರ ಹೆಸರಿನಲ್ಲಿ ಎನ್ಎಂಆರ್ ತೆಗೆದು ಹಾಜರಾತಿ ಹಾಕುತ್ತಿದ್ದು ಹೀಗೆ ಅನೇಕ ವಂಚನೆಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ದಲಿತ ಸೇನೆ ಜಿಲ್ಲಾ ಮುಖಂಡ ಕಾಶಿನಾಥ ಶಿಂಧೆ ಮಾತನಾಡಿ ಗ್ರಾಪಂ.ವ್ಯಾಪ್ತಿಯಲ್ಲಿ ನಿಜವಾದ ಬಡ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಬೇಕು,ತಾಲ್ಲೂಕಿನಾದ್ಯಂತ 2015ರಿಂದ ಇಲ್ಲಿಯವರೆಗೆ ಮಂಜೂರಾದ ಅಂಬೇಡ್ಕರ್ ಭವನ ಹಾಗೂ ಜಗಜೀವನರಾಮ್ ಭವನಗಳ ನಿರ್ಮಾಣ ಪೂರ್ಣಗೊಳಿಸಬೇಕು,ಆಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು,ಪ್ರತಿಯೊಂದು ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶ ಆಹಾರ ಪದಾರ್ಥಗಳನ್ನು ವಿತರಿಸಿ,1981-82ರಲ್ಲಿ ದಲಿತ ಬಡ ರೈತರಿಗೆ ಗ್ರೇಂಟ್ ಅರ್ಡರ್ ಕೂಡ ರೈತ ಹೆಸರಿನಲ್ಲಿ ಜಮೀನು ಮಾಡಬೇಕು,ಕೊಟಗಾ ಕಿತ್ತೂರು ರಾಣಿ ಚೆನ್ನಮ್ಮ ವಸತಿನಿಲಯ ಶೀಘ್ರದಲ್ಲೇ ಪೂರ್ಣಗೊಳಿಸಿ,ಸಮಾಜ ಕಲ್ಯಾಣ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು,ಬಿಸಿಎಂ ವಸತಿ ನಿಲಯಗಳಲ್ಲಿ ಮೇನೂ ಚಾಟ್ ಪ್ರಕಾರ ಆಹಾರ ವಿತರಿಸಿ,ಚಿಮ್ಮಾನಚೋಡ ಮೈಸಮ್ಮಾಯಿ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ,ದೋಟಿಕೊಳ ಗ್ರಾಮದಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿಯು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಕನಕದಾಸರ ವೃತ್ತದಿಂದ ತಾಪಂ.ಕಛೇರಿವರೆಗೆ ತಾಲ್ಲೂಕು ದಲಿತ ಸೇನೆ ಸಮಿತಿ ವತಿಯಿಂದ ಪಾದಯಾತ್ರೆ ನಡೆಸಿ ತಾಲ್ಲೂಕಾ ದಂಡಾಧೀಕಾರಿಗಳು ಹಾಗೂ ತಾಪಂ.ಇಓ ಶಂಕರ ರಾಠೋಡ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಓದಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರು:- ನಾಗರಾಜ ಬೇವಿನಕರ್,ಸುನೀಲ ತ್ರಿಪಾಠಿ,ಶ್ರೀಕಾಂತ,ವಿಶ್ವನಾಥ, ಖತಲಪ್ಪ,ಅಶೋಕ,ದೇವೀಂದ್ರ ಕಟ್ಟಿಮನಿ,ಚೇತನ,ರಾಜಕುಮಾರ ಯಲಕಪಳ್ಳಿ,ಬಲವಂತ ಚನ್ನೂರ,ರಘ,ಜೈಭೀಮ,ವೈಜೀನಾಥ,ರಮೇಶ, ಬಸವರಾಜ,ಗೌತಮ ಮೌರ್ಯ,ರವಿ ಗಾರಂಪಳ್ಳಿ,ಸಂತೋಷ ಕಟ್ಟಿಮನಿ,ರಾಜಕುಮಾರ,ಪರಮೇಶ್ವರ ಗಂಜಗಿರಿ,ಪ್ರಕಾಶ ಗುಲಗಂಜಿ,ಪ್ರಜ್ವಲ್ ಅನೇಕ ಮಹಿಳೆಯರು ಇದ್ದರು.
