ಉದಯವಾಹಿನಿ, ಬ್ರಸ್ಸೆಲ್ಸ್ : ರಷ್ಯಾ ವಿರುದ್ಧದ ಯುದ್ದ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಬ್ರಸ್ಸೆಲ್ಸ್‌ನಲ್ಲಿರುವ ನ್ಯಾಟೋ ಮುಖ್ಯ ಕಾರ್ಯಾಲಯಕ್ಕೆ ಭೇಟಿ ನೀಡಿದ್ದು, ಮುಂದಿನ ಚಳಿಗಾಲದ ಅವಧಿಗೆ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ಮನವಿ ಮಾಡಿದ್ದಾರೆ.
ಸದ್ಯ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಅಮೆರಿಕಾ ಶಸ್ತ್ರಾಸ್ತ್ರಗಳನ್ನು ಪೂರೈಸಲಿದ್ದು, ಇದರಿಂದ ವಾಯು ರಕ್ಷಣೆ, ದೀರ್ಘ-ಶ್ರೇಣಿಯ ಕ್ಷಿಪಣಿಗಳು ಮತ್ತು ಮದ್ದುಗುಂಡುಗಳ ಪೂರೈಕೆ ವಿಚಾರದಲ್ಲಿ ತನ್ನ ದೇಶಕ್ಕೆ ಹಿನ್ನಡೆ ಉಂಟಾಗುವ ಭೀತಿಯಿಂದಲೇ ಝೆಲೆನ್ಸ್ಕಿ ಅವರು ನ್ಯಾಟೋ ಕೇಂದ್ರ ಕಾರ್ಯಾಲಯಕ್ಕೆ ಭೇಟಿ ನೀಡಿ, ಮಹತ್ವದ ಚರ್ಚೆ ನಡೆಸಿದರು. ಈ ವೇಳೆ ಪ್ರತಿಕ್ರಿಯೆ ನೀಡಿರುವ ಝೆಲೆನ್ಸ್ಕಿ, ಮುಂದಿನ ಚಳಿಗಾಲದ ವೇಳೆಗೆ ಯಾವ ರೀತಿಯ ರಕ್ಷಿಸುವುದು ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ. ನಾವು ಸಿದ್ಧಪಡಿಸುತ್ತಿದ್ದೇವೆ, ನಾವು ಸಿದ್ಧರಿದ್ದೇವೆ. ಈಗ ನಮಗೆ ನಾಯಕರ ಬೆಂಬಲ ಬೇಕಾಗಿದೆ. ಅದಕ್ಕಾಗಿಯೇ ನಾನು ಇಂದು ಇಲ್ಲಿದ್ದೇನೆ. ಅಮೆರಿಕಾವು ಉಕ್ರೇನ್‌ನ ರಕ್ಷಣೆಗೆ ಅಗತ್ಯವಾದ ನಿರಂತರ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಈಗಾಗಲೇ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ. ಈ ವೇಳೆ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಕೂಡ ಜೊತೆಗಿದ್ದರು.
