ಉದಯವಾಹಿನಿ, ಚಾಮರಾಜನಗರ: ಕೇವಲ ಅಲ್ಪ ಮಳೆಗೆ ಕೆಸರು ಗದ್ದೆಯಂತಾದ ಈ ರಸ್ತೆಯೇ ಸಾಕ್ಷಿಯಾಗಿದೆ.ಳ್ಳೇಗಾಲ ತಾಲೂಕಿನ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಪಾಳ್ಯ ಉಗನಿಯ ರಸ್ತೆ ಕೇವಲ ಅಲ್ಪ ಮಳೆಗೆ ಕೆಸರು ಗದ್ದೆಯಂತಾಗಿದ್ದು ಸಂಚಾರ ದುಸ್ಥರವಾಗಿದೆ.
ಯಾವುದೇ ಸರ್ಕಾರಗಳು ಬಂದರೂ ಗ್ರಾಮೀಣ ಭಾಗದ ರಸ್ತೆಗಳಿಗೆ ಮುಕ್ತಿ ಇಲ್ಲಾ ಎಂಬುದಕ್ಕೇ ಈ ರಸ್ತೆಯೇ ಸಾಕ್ಷಿಯಾಗಿದೆ.
ನಮ್ಮಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣವಾದರಸ್ತೆಯ ದುಸ್ಥಿತಿ ಕಂಡ ಗ್ರಾಮಸ್ಥರು ರಸ್ತೆಗೆ ಪೂಜೆ ಸಲ್ಲಿಸಿ, ಭತ್ತ, ರಾಗಿ ಪೈರುಗಳನ್ನು ತಂದು ನಾಟಿ ಮಾಡಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಅಲ್ಪ ಮಳೆಗೆ ರಸ್ತೆಯೇಭತ್ತದ ಜಮೀನಾಗಿ ಮಾರ್ಪಟ್ಟಿದೆ ಎಂದು ಎಂದು ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರು ಗ್ರಾಪಂ ವಿರುದ್ಧ ಕಿಡಿಕಾರಿದ್ದಾರೆ.
