ಉದಯವಾಹಿನಿ,ದೇವದುರ್ಗ: ಹಿರಿಯ ನಾಗರಿಕರ ಆರೋಗ್ಯ ಕ್ಷೇಮದಿಂದ ಕೂಡಿರಬೇಕು. ಒತ್ತಡದ ಜೀವನದಲ್ಲಿ ಅವರ ಸಂಧ್ಯಾ ಕಾಲವನ್ನು ಖುಷಿಯಿಂದ ಕಳೆಯಲು ಸಹಕರಿಸಬೇಕೆಂದು ಕ್ಷಯರೋಗ ತಾಲೂಕು ಮೇಲ್ವಿಚಾರಕ ಮಹೇಶ ನಾಯಕ ಹೇಳಿದರು. ಅರಕೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಕೆಮ್ಮು, ರಾತ್ರಿಯಲ್ಲಿ ಜ್ವರ, ತೂಕ ಕಡಿಮೆಯಾಗುವುದು, ಅಶಕ್ತತೆ, ಕಫದಲ್ಲಿ ರಕ್ತ, ರಾತ್ರಿಯಲ್ಲಿ ಬೆವರು, ಎದೆನೋವು, ಹಸಿವಾಗದಿರುವುದು ಕ್ಷಯ ರೋಗದ ಲಕ್ಷಣಗಳಾಗಿವೆ. ಹಿರಿಯ ನಾಗರಿಕರು ಕಾಲಕಾಲಕ್ಕೆ ತಪಾಸಣೆಗೆ ಒಳಪಡಬೇಕು. ಬಿಪಿ, ಶುಗರ್ ನಿಂದ ಬಳಲುತ್ತಿರುವವರು ಹೆಚ್ಚಿನ ಒತ್ತಡಗಳಿಗೆ ಆಸ್ಪದ ನೀಡಬಾರದು ಎಂದರು. ಎನ್‍ಸಿಡಿ ಆಪ್ತ ಸಮಾಲೋಚಕ ಉಮೇಶ ಮಾತನಾಡಿ, ಹಿಂದೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಜನರು ಸಾಯುವ ಸಂಖ್ಯೆ ಹೆಚ್ಚಿತ್ತು. ಆದರೆ ಪ್ರಸ್ತುತ ಸಾಂಕ್ರಾಮಿಕ ರೋಗಗಳಿಗಿಂತ ಅಸಾಂಕ್ರಾಮಿಕ ರೋಗಗಳಾದ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶವಾಯು, ಹೃದಯ ಸಂಬಂಧಿ ಕಾಯಿಲೆಗಳಿಗೆ ಸಾವನ್ನಪ್ಪುವ ಪ್ರಮಾಣ ಹೆಚ್ಚಾಗಿದೆ. ಬದಲಾದ ಜೀವನ ಶೈಲಿಯೇ ಇದಕ್ಕೆ ಕಾರಣ ಎಂದು ಕಳವಳ ವ್ಯಕ್ತಪಡಿಸಿದರು. ಶಿಬಿರದಲ್ಲಿ ಸುಮಾರು 250 ಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಬಿ.ಪಿ ಮತ್ತು ಮದುಮೇಹ, ಕ್ಷಯರೋಗದ ತಪಾಸಾಣೆ ಮಾಡಲಾಯಿತು, ಮದುಮೇಹ, ಬಿ.ಪಿ ಇರುವಂತ ರೋಗಿಗಳಿಗೆ ಉಚಿತ ಮಾತ್ರೆಗಳನ್ನು ವಿತರಿಸಲಾಯಿತು. ಎನ್‍ಸಿಡಿ ಆಪ್ತ ಸಮಾಲೋಚಕ ನಾಗಲಿಂಗಪ್ಪ, ನೇತ್ರಾಧಿಕಾರಿ ವಾದಿರಾಜಾ, ಡಿಇಒ ಶರಣಬಸವ, ಆರ್‍ಕೆಎಸ್‍ಕೆ ಚಿರಂಜೀವಿ, ರಮೇಶ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!