ಉದಯವಾಹಿನಿ, ಮುದ್ದೇಬಿಹಾಳ ; ಮಲೇರಿಯಾ, ಚಿಕುನ್ ಗುನ್ಯಾ , ಡೆಂಗ್ಯೂ ಮತ್ತು ಮೆಸಳು ಜ್ವರ ಮಾನ್ಸೂನ್ ಮಳೆಗಾಲದ‌‌ ನಂತರ ಉಲ್ಬಣಗೊಂಡು ಸೆಪ್ಟೆಂಬರ್ ಅಕ್ಟೋಬರ್ ವರಗೆ ಹೆಚ್ಚಾಗಿ ಸಂಭವಿಸುತ್ತದೆ ಆದ್ದರಿಂದ ನಾಗರಿಕರು ಆರೋಗ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಲೂಕ ಆರೋಗ್ಯಧಿಕಾರಿ‌ ಸತೀಶ್ ತಿವಾರಿ ಹೇಳಿದರು ಅವರು ಶುಕ್ರವಾರ ತಾಲೂಕ ಆರೋಗ್ಯ ಅಧಿಕಾರಿಗಳ‌ ಕಾರ್ಯಾಲಯ ಆವರಣದಲ್ಲಿ ರಾಷ್ಟ್ರೀಯ ರೋಗವಾಹಕ , ಆಶ್ರಿತ ರೋಗಗಳ ನಿರ್ಮೂಲನೆ ಕಾರ್ಯಕ್ರಮದಡಿ ಮಲೇರಿಯಾ ಡೆಂಗ್ಯೂ ಕಾಯಿಲೆಗಳ ಅರಿವು ಮೂಡಿಸುವ ಡೆಂಗ್ಯೂ ಜಾಗೃತಿ ರಥ ಅಭಿಯಾನಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು ಈ ಕಾಯಿಲೆಗೆ ಯಾವುದೇ ನಿರ್ದಿಷ್ಟ ಔಷಧಿ ಲಸಿಕೆ ಇರುವುದಿಲ್ಲ ವೈದ್ಯರಿಂದ ಪರೀಕ್ಷೆ ಮಾಡಿಕೊಂಡು ಚಿಕಿತ್ಸೆ ಪಡೆಯಬೇಕು ಸೊಳ್ಳೆಗಳ ನಿಯಂತ್ರಣ ಒಂದೇ ಈ ರೋಗದ ಹತೋಟಿಗೆ ಮುಖ್ಯ ವಿಧಾನವಾಗಿದೆ. ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಡ್ರಮ್ಮು, ಮಣ್ಣಿನ ಮಡಿಕೆ, ಉಪಯೋಗಿಸಿದ ಒಳಕಲ್ಲು ಮುಂತಾದ ಕಡೆ ಶೇಖರವಾಗುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮುಂಜಾಗ್ರತಾ ಕ್ರಮಗಳು, ಎಲ್ಲಾ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರ್‍ಕೂಲರ್ ಇತ್ಯಾದಿಗಳನ್ನು ವಾರಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳುವುದು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚುವುದು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಸೂಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬೇಕೆಂದು ವಿವರಿಸಿದರುಅಭಿಯಾನದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳ ಎ ಎಸ್ ತೇರದಾಳ ಮೇಲ್ವಿಚಾರಕಿ ಐ ಸಿ ಮಾನಕರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ ಎಸ್ ಶಿವಯೋಗಿಮಠ,ಎನ್ ಜಿ ತಾಳಿಕೋಟಿ,ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ಗೌಡರ,ಎಸ್ ಆರ್ ಸಜ್ಜನ, ರೇಷ್ಮ ರೂಡಗಿ,ಎಂಟಿಎಸ್ ಎಸ್ ಸಿ ರುದ್ರವಾಡಿ,ಬಿಪಿಎಂಓ ಬಸವರಾಜ,ಲಕ್ಷ್ಮಿ ಚವ್ಹಾಣ, ಆಶಾ ಮೇಲ್ವಿಚಾರಕಿ ಪ್ರಶಿಭಾರಾಣಿ ಹಾಗೂ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!