ಉದಯವಾಹಿನಿ ರಾಮೇಶ್ವರಂ: ಚಂದ್ರಯಾನ-೩ ರ ನಂತರ ಭಾರತವು ಬಾಹ್ಯಾಕಾಶ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಅಮೆರಿಕಾದ ನಾಸಾ ತಜ್ಞರು ಬಯಸಿದ್ದರು. ಸದ್ಯ ನಮ್ಮ ದೇಶ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದ್ದು, ಜ್ಞಾನ ಮತ್ತು ಬುದ್ಧಿವಂತಿಕೆಯ ಮಟ್ಟವು ವಿಶ್ವದಲ್ಲೇ ಅತ್ಯುತ್ತಮವಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್. ಸೋಮ್‌ನಾಥ್ ತಿಳಿಸಿದ್ದಾರೆ.
ಸದ್ಯ ಸಮಯ ಬದಲಾಗಿದ್ದು, ಭಾರತವು ಅತ್ಯುತ್ತಮ ಸಾಧನಗಳು ಮತ್ತು ರಾಕೆಟ್‌ಗಳನ್ನು ನರ‍್ಮಿಸಲು ಸರ‍್ಥವಾಗಿದೆ. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಖಾಸಗಿ ಕಂಪೆನಿಗಳಿಗೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆದಿದ್ದಾರೆ. ಚಂದ್ರಯಾನ-೩ರಲ್ಲಿ ನಾವು ಬಾಹ್ಯಾಕಾಶ ನೌಕೆಯನ್ನು ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದಾಗ ನಾವು ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ, ನಾಸಾ-ಜೆಪಿಎಲ್‌ನಿಂದ ತಜ್ಞರನ್ನು ಆಹ್ವಾನಿಸಿದ್ದೆವು.
