ಉದಯವಾಹಿನಿ, ಹೈದರಾಬಾದ್: ಪ್ರಭಾಸ್ ಅಭಿಮಾನಿಗಳು ಸಲಾರ್: ಭಾಗ ೧- ಕದನ ವಿರಾಮ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಸರಣಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಯೋಜನೆ ಭಾರೀ ನಿರೀಕ್ಷೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ .ಆದರೆ ಇದುವರೆಗೂ ಸಲಾರ್ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಪ್ರಭಾಸ್ ಅಭಿಮಾನಿಗಳಿಗೆ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಪ್ರಭಾಸ್ ಅವರ ಇನ್‌ಸ್ಟಾಗ್ರಾಮ್ ಖಾತೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದು, ಅಭಿಮಾನಿಗಳು ಟೆನ್ಷನ್ ಆಗಿದ್ದಾರೆ. ಇದರ ಹಿಂದಿನ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಪ್ರಭಾಸ್ ಅವರ ಇನ್ಸ್ಟಾ ಖಾತೆ ಕಣ್ಮರೆಯಾಗಿ ೨೪ ಗಂಟೆಗಳು ಕಳೆದರೂ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಅದರಲ್ಲೂ ಪ್ರಭಾಸ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಾರದೆ ಅಭಿಮಾನಿಗಳ ತಳಮಳ ಇನ್ನಷ್ಟು ಹೆಚ್ಚಾಗಿದೆ. ಈ ಸನ್ನಿವೇಶವನ್ನು ಅಭಿಮಾನಿಗಳು ತಮಗೆ ಇಷ್ಟ ಬಂದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಯಾರು ಖಾತೆ ಹ್ಯಾಕ್ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಫೇಕ್ ಫಾಲೋವರ್ಸ್ ಗಳ ಸಂಖ್ಯೆ ಜಾಸ್ತಿ ಇರಬೇಕು ಅದಕ್ಕಾಗಿಯೇ ಖಾತೆಯನ್ನು ಸಸ್ಪೆಂಡ್ ಮಾಡಿರಬಹುದು ಎಂದು ಪ್ರಭಾಸ್ ವಿರೋಧಿ ಅಭಿಮಾನಿಗಳು ಪೋಸ್ಟ್ ಹಾಕುತ್ತಿದ್ದಾರೆ. ಇದಕ್ಕೆ ಶಾರುಖ್ ಖಾನ್ ಅಭಿಮಾನಿಗಳೇ ಕಾರಣ ಎಂದು ಕೆಲ ಪ್ರಭಾವ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಶಾರುಖ್ ಅಭಿಮಾನಿಗಳು ಪ್ರಭಾಸ್ ಖಾತೆಯನ್ನು ಹ್ಯಾಕ್ ಮಾಡಬಹುದೆಂದು ಶಂಕಿಸಲಾಗಿದೆ ಮತ್ತು ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.ಶಾರುಖ್ ಅಭಿಮಾನಿಗಳು ಪ್ರಭಾಸ್ ಖಾತೆ ಹ್ಯಾಕ್ ಮಾಡಲು ಮತ್ತೊಂದು ಕಾರಣವಿದೆ. ಪ್ರಭಾಸ್ ಅವರ ಸಲಾರ್ ಮತ್ತು ಶಾರುಖ್ ಅವರ ಡಂಕಿ ನಡುವೆ ಬಾಕ್ಸ್ ಆಫೀಸ್ ವಾರ್ ನಡೆಯಲಿದೆ.
