ಉದಯವಾಹಿನಿ, ಹೈದರಾಬಾದ್: ಬಾಹುಬಲಿ-೨ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಗೆ ಸರಿಯಾದ ಹಿಟ್ ಸಿಗಲಿಲ್ಲ. ನಂತರ ಬಂದ ಎಲ್ಲಾ ಚಿತ್ರಗಳು ಪ್ರಭಾಸ್ ಗೆ ನಿರಾಸೆ ಮೂಡಿಸಿದವು. ಡಾರ್ಲಿಂಗ್ ಅಭಿಮಾನಿಗಳು ಬ್ಲಾಕ್ಬಸ್ಟರ್ ಮತ್ತು ಹಿಟ್ ಟ್ರ್ಯಾಕ್ಗಾಗಿ ಕಾಯುತ್ತಿದ್ದಾರೆ. ಹಾಗಾಗಿಯೇ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬರುತ್ತಿರುವ ಸಲಾರ್ ಚಿತ್ರಕ್ಕೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ.
ಚಿತ್ರ ಡಿಸೆಂಬರ್ ೨೨ ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿರುವ ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ಹುಟ್ಟುಹಬ್ಬದ ದಿನವಾದ ನಿನ್ನೆ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಪೃಥ್ವಿರಾಜ್ ಈ ಪೋಸ್ಟರ್ ನಲ್ಲಿ ತುಂಬಾ ಸೀರಿಯಸ್ ಆಗಿ ಪವರ್ ಫುಲ್ ಆಗಿ ಕಾಣಿಸುತ್ತಿದ್ದಾರೆ. ಹಣೆಯಲ್ಲಿ ತಿಲಕ, ಕೊರಳಲ್ಲಿ ಟವೆಲ್ ಹಾಕಿಕೊಂಡು ನಡೆಯುವ ನೋಟ. ಈ ಪೋಸ್ಟರ್ ಶೇರ್ ಮಾಡಿರುವ ಹೊಂಬಾಳೆ ಫಿಲಂಸ್ ಅದಕ್ಕೆ ’ವರದರಾಜ ಮನ್ನಾರ್ ಎಂದು ಶೀರ್ಷಿಕೆ ನೀಡಿದೆ. ಈ ಪೋಸ್ಟರ್ ಶೇರ್ ಮಾಡಿರುವ ಪ್ರಭಾಸ್ ಅಭಿಮಾನಿಗಳು ಪೃಥ್ವಿರಾಜ್ ಗೆ ವಿಶ್ ಮಾಡುತ್ತಿದ್ದಾರೆ. ಥಿಯೇಟರ್‌ನಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ನಡುವಿನ ಸಾಹಸ ದೃಶ್ಯಗಳನ್ನು ನೋಡಲು ಕಾಯುತ್ತಿದ್ದೇವೆ ಎಂಬ ಕಾಮೆಂಟ್‌ಗಳು ಬರುತ್ತಿವೆ. ಇವರಿಬ್ಬರೂ ದೈಹಿಕವಾಗಿ ಬಲಾಢ್ಯ ಹೀರೋ ಆಗಿರುವುದರಿಂದ ಇವರ ನಡುವಿನ ಫೈಟ್ಸ್ ಅದ್ಭುತವಾಗಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
