ಉದಯವಾಹಿನಿ,.ತಾಳಿಕೋಟೆ: ಹೊಲದಲ್ಲಿ ಬೆಳೆದ ಪಾಲು ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಲು ಕೊಡುವಂತೆ ಕೇಳಿದ ತನ್ನ ಪತ್ನಿ ಚಾಂದಬಿ ಬಳಗಾನೂರ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ತಾಳಿಕೋಟಿ ಪೆÇಲೀಸ್ ಠಾಣೆಯಲ್ಲಿ ಕೂಚಬಾಳ ಗ್ರಾಮದ ರೈತ ಲಾಳೇಮಶ್ಯಾಕ ಬಳಗಾನೂರ ದೂರು ದಾಖಲಿಸಿದ್ದಾರೆ.
ಘಟನೆ ವಿವರ : ಕೂಚಬಾಳದ ಬಸವಂತ್ರಾಯ ಪಾಟೀಲ್ ಇವರ 32 ಎಕರೆ ಜಮೀನಿನಲ್ಲಿ ಗ್ರಾಮದ ಲಾಳೇಮಶ್ಯಾಕ ಬಳಗಾನೂರ ಹಾಗೂ ಸುರೇಶ ಕರನಾಳ ಕೂಡಿಕೊಂಡು ನಾಲ್ಕು ವರ್ಷಗಳಿಂದ ಪಾಲಿಗೆ ಮಾಡಿಕೊಂಡು ಬರುತ್ತಿದ್ದರು. ಹೊಲದಲ್ಲಿ ಬೆಳೆದಿದ್ದ ಮಾಲಿನಲ್ಲಿ ಎರಡು ಪಾಲು ಮಾಡಿ ಅದರಲ್ಲಿ ಹೊಲದ ಮಾಲೀಕರಿಗೆ ಒಂದು ಇನ್ನುಳಿದ ಪಾಲಿನಲ್ಲಿ ಇಬ್ಬರು ಹಂಚಿಕೆ ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಕಳೆದ ಎರಡು ವರ್ಷಗಳಿಂದ ಹೊಲದಲ್ಲಿ ಬೆಳೆದಿದ್ದ ಬೆಳೆಯಲ್ಲಿ ತನ್ನ ಪಾಲಿನ ಹಣ ಕೊಡುವಂತೆ ಸುರೇಶ ಕರನಾಳಗೆ ಲಾಳೇಮಶ್ಯಾಕ ಬಳಗಾನೂರ ಕೇಳುತ್ತ ಬಂದಿದ್ದ.ಇದರಿಂದ ಕುಪಿತನಾಗಿದ್ದ ಸುರೇಶ ಅ.11 ರಂದು ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಲಾಳೇಮಶ್ಯಾಕ ಎಂದಿನಂತೆ ತನ್ನ ಎರಡು ವರ್ಷಗಳ ಹಿಂದಿನ ಪಾಲಿನ ಹಣ ಹಾಗೂ ಈ ವರ್ಷದ್ದು ಸೇರಿ ಕೊಡುವಂತೆ ಕೇಳಿಕೊಂಡಿದ್ದಾನೆ.
