ಉದಯವಾಹಿನಿ ಸಿಂಧನೂರು: ಕರ್ನಾಟಕ ರಾಜ್ಯ ಭೂ ಸುಧಾರಣೆ ಕಾಯ್ದೆ ಅಡಿಯಲ್ಲಿ  ಜಾರಿಗೊಳಿಸಿ ಮತ್ತು ಆದೇಶ ಹೊರಡಿಸಿ ಎಂದು ಹೋರಾಟವನ್ನು ಮಾಡುತ್ತಾ ಬಂದಿರುವರು ಮತ್ತು  ಹೋರಾಟದಲ್ಲಿ ಜಯ ಗಳಿಸಿದ್ದು ನಾವು ಸೋತಿದ್ದು ನೀವು ಸರ್ಕಾರದ ಭೂ ಕಬ್ಜ ಮಾಡಿ ಆಸ್ತಿ ಮಾಡಿರುವ ಭೂಗಳ್ಳರ ನೀವು ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರ ವಿರುದ್ಧ ಸಿಪಿಎಂ ವಾಗ್ದಾಳಿ ನಡೆಸಿದರು.
ನಗರದ (ಅಟ್ರಾಗೇಟ್ ) ಗಾಂಧಿ ಸರ್ಕಲ್ ನಲ್ಲಿ ಸುಮಾರು ಒಂದು ವರಿ ಗಂಟೆ ರಸ್ತೆ ತಡೆ ಚಳವಳಿ ಉದ್ದೇಶಿಸಿ ಮಾತನಾಡಿದ ಸಿಪಿಐ (ಎಂ ಎಲ್ ) ರೆಡ್ ಸ್ಟಾರ್ ರಾಜ್ಯಾಧ್ಯಕ್ಷರಾದ ಆರ್ ಮಾನಸಯ್ಯ ಅವರು ನಮ್ಮ ಹೋರಾಟದಲ್ಲಿ ಮಾನ್ಯ ತಹಶೀಲ್ದಾರರಿಗೆ ಸಿಂಧನೂರು ತಾಲ್ಲೂಕಿನಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಚಂದ್ರ ಭೂಪಾಲ್ ನಾಡಗೌಡ ಚಂದ್ರ ನಾಡಗೌಡ ಅವರನ್ನು ಸರ್ಕಾರದ ಭೂ ಯನ್ನು ಕಬ್ಜ ಮಾಡಿದ್ದಾರೆ.
ವಿಪ್ರೇ ಮಾಡಿದ್ದಾರೆ. ಅವರು ಮೇಲೆ  ಕಾನೂನು ಪ್ರಕಾರ ಎಫ್ ಐಆರ್ ಮಾಡಿ ಅಂತ ಹೇಳಿದ್ದೇವೆ ಯಾಕೆ ಮಾಡಿಲ್ಲ. ಮಾನ್ಯ ತಹಶೀಲ್ದಾರರು ಯಾವ ಕಾನೂನು ತಿಳಿದುಕೊಂಡಿದ್ದೆ ರೆ. ಇದುವರೆಗೂ ನೀವು ಭೂ ಕಬ್ಜ ಮಾಡಿದ ಭೂಗಳ್ಳರು ಎಫ್ ಐಆರ್ ಮಾಡಿದ್ದು ಒಂದು ತಹಶೀಲ್ದಾರ್ ಉದಾಹರಣೆ ತೋರಿಸಿಲಿ ಎಂದು ಆಗ್ರಹಿಸಿದರು.
20011ರ ಸರ್ಕಾರ ಭೂ ಕಬಳಿಕೆ ಮಾಡುವರ ವಿರುದ್ಧ ಕರ್ನಾಟಕ ರಾಜ್ಯದಲ್ಲಿ ಪವರ್ ಫುಲ್ ಆಕ್ಟ್ ಕಾನೂನು ಇದೆ.ಯಾರೇ ಒಂದು ಗೇಣು ಭೂ ಕಬ್ಜ ಮಾಡಿದರೆ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಲಿಕ್ಕೆ ಒಂದು ಪ್ರಯೋಜನ ಮಾಡಿದ್ದೀರಿ ಮತ್ತು  ಎಲ್ಲ ಜಿಲ್ಲೆಗಳಲ್ಲಿ ಪ್ರಾಧಿಕಾರ ಮಾಡಿದ್ದೀರಿ. ಸರಕಾದ ಭೂ ಕಬ್ಜ ಅವರನ್ನು ಹೊರಗ ಹಾಕಲಿಕ್ಕೆ ಒಂದು ಕಾನೂನು ಮಾಡಿ ಅಧಿಕಾರಿಗಳನ್ನು ನೇಮಕ ಮಾಡಿದ್ದೀರಿ ಅವರೆಲ್ಲರೂ ಎಲ್ಲಿಗೆ ಹೋದರು ಎಂದು ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದಕ್ಕೆಲ್ಲ ಮುಖ್ಯ ಜಿಲ್ಲಾಧಿಕಾರಿ . ಇಷ್ಟೆಲ್ಲ ಅಲ್ಲಿಂದ ಇಲ್ಲಿವರೆಗೂ ಹೋರಾಟ ಮಾಡಿದರು ಸಹ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಹೇಳಿದರು.
ಅದರು ಸಹ ನಮ್ಮ ಡಿಎಸ್ಪಿ ಹಾಗೂ ಸಿಪಿಐ ಅವರು ಡಿಸಿ ಕಚೇರಿ ಕರೆದು ಕೊಂಡು ಹೋಗುತ್ತವೆ ಎಂದು ಹೇಳಿದರು. ಆದರೆ ಡಿಸಿ ಕಚೇರಿನು ನಮಗೆ ಹೊಸದೇನಲ್ಲ.1983 ರಿಂದ ಡಿಸಿ ಕಚೇರಿ ಮುಂದೆ ಹೋರಾಟ ಮಾಡುತ್ತಾ ಬಂದಿದ್ದೇವೆ ನಾವು ಇಂತವರನ್ನು ನೂರಾರು ಡಿಸಿಗಳನ್ನು ನೋಡಿದ್ದೇವೆ ಆ ಪೈಕಿ ಜನರು ಪರವಾಗಿ ಗೌರವದಿಂದ ಬಹುಳ ಕಡಿಮೆ. ಏಕೆಂದರೆ ಇಂಥದೊಂದು ಮಹತ್ವದ ಹೋರಾಟ ನಡೆದಿದೆ.ಯಾಕೆ ಹೋರಾಟ ನಡೆದಿದೆ ಎಂಬುದು ಕಂದಾಯ ಸಚಿವರಿಗೆ ಕಲ್ಪನೆ ಇಲ್ಲದ ಯಕ್ಷಪ್ರಶ್ನೆಯಾಗಿದೆ.?  ಎಂದರೆ ಇದರ ಅರ್ಥ ಭೂ ಕಬ್ಜ ಮಾಡಿದ ಭೂಗಳ್ಳರಿಗೆ ಕುಮ್ಮಕ್ಕು ನೀಡಿತ್ತು ಬಂದಿರುತ್ತಾರೆ.  ಕಂದಾಯ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ಇದು ಬಹುಳ ದಿನ ನಡೆಯುವುದಿಲ್ಲ. ಇನ್ನು ಬೇರೆ ಬೇರೆ ರೀತಿಯ ಹೋರಾಟವೂ ಮುಂದುವರೆಯುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!