
ಉದಯವಾಹಿನಿ ಸಿಂಧನೂರು: ಪ್ರತಿ ವರ್ಷವೂ ನವರಾತ್ರಿ ಉತ್ಸವ ಬಂತೆಂದರೆ ಸಾಕು ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮ ಅರಳುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ಜಿಲ್ಲಾಧ್ಯಕ್ಷರಾದ ಡಾll ನಾಗವೇಣಿ ಎಸ್ ಪಾಟೀಲ್ ಅವರು ನುಡಿದರು.ಅವರು ನಗರದ 1008 ಕಿಲ್ಲೆ ಬ್ರಹ್ಮ ಮಠದಲ್ಲಿ ನವರಾತ್ರಿ ಉತ್ಸವದ ಆರಂಭಕ್ಕೆ ಜ್ಯೋತಿ ಬಗಲಿಸುವುದರೊಂದಿಗೆ ಉದ್ಘಾಟಿಸಿ ನವರಾತ್ರಿ ಉತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಹಿಂದಿನ ಕಾಲದ 9 ದಿನಗಳ ಕಾಲ ಶ್ರೀರಾಮ ಸೇನೆಯು ರಾಮ ಸೇನೆಯೊಂದಿಗೆ ಯುದ್ಧ ಮಾಡಿ ಕೊನೆಗೆ 10ನೇ ದಿನದಂದು ದಶಕಂಠ ರಾಮನನ್ನು ಸಂಹರಿಸುವ ಮೂಲಕ ವಿಜಯ್ಯೋತ್ಸವವನ್ನು ಆಚರಿಸಿ ಅದೇ ವಿಜಯದಶಮಿ ಎಂದು ಪ್ರತಿ ವರ್ಷ ನಾವೆಲ್ಲರೂ ಆಚರಿಸುತ್ತಿರುವೆ ಎಂದು ಡಾ. ನಾಗವೇಣಿ ಅವರು ವಿವರಿಸಿದರು.ವೇದಿಕೆ ಮೇಲೆ ನಗರಸಭೆ ಮಾಜಿ ಅಧ್ಯಕ್ಷರಾದ ಲಲಿತ ಕಡಗೋಲ್, ಬಿಜೆಪಿ ಜಿಲ್ಲಾಧ್ಯಕ್ಷರಾದ ವಿಜಯರಾಜೇಶ್ವರಿ, ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ನಿರ್ಮಲಾ ಬೆಣ್ಣೆ, ಜಾನಪದ ಪರಿಷತ್ತು ಅಧ್ಯಕ್ಷರಾದ ದಾನಮ್ಮ ಹಾಗೂ ಗಣ್ಯರಾದ ಗೋಪಾಲ್ ನಾಯಕ್, ನಿಜ ಮು ಜವಳಿ, ರೇಣುಕಾಚಾರ್ಯ ಗುತ್ತೇದಾರರು ಇನ್ನು ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಾಂತ ಮಲ್ಲ ಶಿವಾಚಾರ್ಯರು ಮಹಾಸ್ವಾಮಿಗಳು ವಹಿಸಿ ಬ್ರಹ್ಮ ಸಮೂಹಕ್ಕೆ ಆಶೀರ್ವಚನ ನೀಡಿದರು. ನಂತರ ಪುರಾಣ ಕಾರ್ಯಕ್ರಮ ಆರಂಭವಾಯಿತು…
