ಉದಯವಾಹಿನಿ, ಬೆಂಗಳೂರು: ಕರ್ನಾಟಕದ ೬ ಜಿಲ್ಲೆಗಳ ಗ್ರಾಮಗಳಲ್ಲಿ ಬಾಲ್ಯ ವಿವಾಹ ತಡೆದು ಹಾಕುವ ಪ್ರತಿಜ್ಞೆ ಅಭೂತಪೂರ್ವ ಸಂಖ್ಯೆಯ ಪುರುಷರು, ಮಹಿಳೆಯರು ಮತ್ತು ಮಕ್ಕಳು ರಾಜ್ಯದಿಂದ ಬಾಲ್ಯ ವಿವಾಹವನ್ನು ತೊಡೆದುಹಾಕಲು ಪ್ರತಿಜ್ಞೆ ಮಾಡಿದರು.
ಈ ವಾರದ ಆರಂಭದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನದಲ್ಲಿ ಪೂರ್ಣ ಪ್ರಮಾಣದ ಭಾಗವಹಿಸುವಿಕೆಗಾಗಿ ಮತ್ತು ಕರ್ನಾಟಕವನ್ನು ಬಾಲ್ಯವಿವಾಹ ಮುಕ್ತವಾಗಿಸುವ ಪ್ರತಿಜ್ಞೆ ಸ್ವೀಕರಿಸಲು ಅಧಿಕಾರಿಗಳು ಮತ್ತು ಮಧ್ಯಸ್ಥಗಾರರಿಗೆ ಸರ್ಕಾರ ಪತ್ರ ಮುಖೇನ ಮಾಹಿತಿ ನೀಡಿದ್ದು ಅದರಂತೆ ಪೊಲೀಸ್ ಠಾಣೆಗಳಿಂದ ಹಿಡಿದು ನ್ಯಾಯಾಲಯದ ಕೊಠಡಿಗಳು, ಪಂಚಾಯತ್‌ಗಳು ಮತ್ತು ಸಮುದಾಯ ಕೇಂದ್ರಗಳು, ಬಾಲ್ಯ ವಿವಾಹದಿಂದ ತಪ್ಪಿಸಿಕೊಂಡ ಚಿಕ್ಕ ಮಕ್ಕಳಿಂದ ವಯಸ್ಸಾದ ಮಹಿಳೆಯರ ವರೆಗೆ, ಕೋಟ್ಯಾಂತರ ಜನರು ಸೇರಿ ಬಾಲ್ಯ ವಿವಾಹವನ್ನು ನಿಲ್ಲಿಸುವ ಪ್ರತಿಜ್ಞೆಯನ್ನು ಮಾಡಿದರು.
