ಉದಯವಾಹಿನಿ, ಬೀಜಿಂಗ್: ತಮ್ಮ ದೇಶ ಆರ್ಥಿಕ ದಬ್ಬಾಳಿಕೆ ಮತ್ತು ಬಣಗಳ ಪೈಪೋಟಿಯನ್ನು ತಿರಸ್ಕರಿಸುತ್ತದೆ ಎಂದು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಪ್ರತಿಪಾದಿಸಿದ್ದಾರೆ.
ಬೀಜಿಂಗ್ ನಲ್ಲಿ ಆಯೋಜಿಸಿರುವ ಚೀನಾದ ಮಹತ್ವಾಕಾಂಕ್ಷೆಯ ‘ಬೆಲ್ಟ್ ಆ?ಯಂಡ್ ರೋಡ್’ (ಬಿಆರ್‌ಐ) ಯೋಜನೆಯ ೧೦ನೇ ವರ್ಷಾಚರಣೆಯ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಚೀನಾವು ಸೈದ್ಧಾಂತಿಕ ಮುಖಾಮುಖಿ, ಭೌಗೋಳಿಕ ರಾಜಕೀಯ ಆಟಗಳು ಅಥವಾ ಬಣಗಳ ಮುಖಾಮುಖಿಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ಏಕಪಕ್ಷೀಯ ನಿರ್ಬಂಧ, ಆರ್ಥಿಕ ದಬ್ಬಾಳಿಕೆ, ಜಾಗತಿಕ ವೇದಿಕೆಯಲ್ಲಿ ಒಬ್ಬರನ್ನು ಪ್ರತ್ಯೇಕಿಸುವುದು, ಸಂಬಂಧ ಕಡಿದುಕೊಳ್ಳುವುದು ಇತ್ಯಾದಿಗಳನ್ನು ನಾವು ವಿರೋಧಿಸುತ್ತೇವೆ. ಇತರರ ಅಭಿವೃದ್ಧಿಯನ್ನು ಬೆದರಿಕೆ ಎಂದು ಪರಿಗಣಿಸುವುದು, ಆರ್ಥಿಕ ಪರಸ್ಪರ ಅವಲಂಬನೆಯನ್ನು ಅಪಾಯ ಎಂದು ಪರಿಗಣಿಸುವುದು ಯಾರ ಬದುಕನ್ನೂ ಉತ್ತಮಗೊಳಿಸದು ಮತ್ತು ಸ್ವಂತ ಅಭಿವೃದ್ಧಿಗೆ ವೇಗ ನೀಡುವುದಿಲ್ಲ. ಇದರ ಬದಲು, ಬಿಆರ್ ಐ ಜಾಗತಿಕ ಆರ್ಥಿಕತೆಗೆ ಹೊಸ ಪ್ರಚೋದನೆಯನ್ನು ತುಂಬಲು ಪ್ರಯತ್ನಿಸುತ್ತದೆ ಎಂದು ಜಿನ್‌ಪಿಂಗ್ ಹೇಳಿದ್ದಾರೆ.
