ಉದಯವಾಹಿನಿ, ಕೆಂಭಾವಿ : ದಸರಾ ಉತ್ಸವ ಸಮಿತಿಯಿಂದ ಪ್ರತಿವರ್ಷ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಟ್ಟಣದಲ್ಲಿ ಯುವಕರ ಪಡೆ ಸಕ್ರಿಯವಾಗಿದೆ ಎಂದು ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ ಹೇಳಿದರು.
ಪಟ್ಟಣದಲ್ಲಿ ಬುಧವಾರ ದಸರಾ ಉತ್ಸವ ಸಮಿತಿಯಿಂದ ಹಮ್ಮಿಕೊಂಡ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇವಲ ವಿದ್ಯಾರ್ಥಿಗಳಿಗಲ್ಲದೆ ಪಟ್ಟಣದ ರೈತರಿಗೆ, ಮಹಿಳೆಯರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿ ಊರ ಹಬ್ಬದಂತೆ ಮಾಡಲಾಗಿದೆ. ಅನೇಕರು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ದಸರಾ ಉತ್ಸವ ಸಮಿತಿ ಸದೃಢವಾಗಿದ್ದು ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಲಿ ಎಂದು ಹಾರೈಸಿದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಬಾಬುಗೌಡ ಪಾಟೀಲ, ಅಧ್ಯಕ್ಷ ಡಿ.ಸಿ.ಪಾಟೀಲ, ಮೋಹನರೆಡ್ಡಿ ಡಿಗ್ಗಾವಿ, ಗುರು ಕುಂಬಾರ, ಉಪಾಧ್ಯಕ್ಷ ಪರಶುರಾಮ, ಕಾರ್ಯದರ್ಶಿ ಬಂದೇನವಾಜ ನಾಲತವಾಡ, ಸೂಗು ಇಂಡಿ, ನರಸಿಂಹ ವಡ್ಡೆ, ಹಣಮಂತ ಪಡಸಾಲಿ, ಅಂಬಲಪ್ಪ ಶಹಾಪುರ, ಪವನ ಕುಲಕರ್ಣಿ, ಮಲ್ಲನಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು. ರಂಗೋಲಿ ಸ್ಪರ್ಧೆಯ ನಿರ್ಣಾಯಕರಾಗಿ ನಾಗರತ್ನ ಕುಲಕರ್ಣಿ, ಪವಿತ್ರಾ ವಡ್ಡೆ, ಶಿಕ್ಷಕ ಚರಂತಿಮಠ ಕಾರ್ಯನಿರ್ವಹಿಸಿದರು.
