
ಉದಯವಾಹಿನಿ ಮುದಗಲ್ಲ : ಐತಿಹಾಸಿಕ ಮುದಗಲ್ಲ ಸಮೀಪದ ಸಂತೆಕಲ್ಲೂರು ಗ್ರಾಮದಲ್ಲಿ ಒಂದು ತಿಂಗಳುಗಳ ಹಿಂದೆ ಬಂದಿದ್ದ ಅಸ್ವಸ್ಥಳಾಗಿ ಹೆಸರು ಹೇಳದ ಬುದ್ಧಿಮಾಂದ್ಯಳ ಬಗ್ಗೆ ಗ್ರಾಮದ ವೆಂಕಟೇಶ ಗೌಂಡಿ ಮತ್ತು ಗ್ರಾಮದ ಗುರು ಹಿರಿಯರು ದೂರವಾಣಿ ಮೂಲಕ ಕಾರುಣ್ಯ ಆಶ್ರಮಕ್ಕೆ ಸಂಪರ್ಕಿಸಿ ಆಕೆಯನ್ನು ಕಾಪಾಡುವಂತೆ ಮನವಿ ಮಾಡಿಕೊಂಡರು. ತಕ್ಷಣ ಕಾರ್ಯ ಪ್ರವೃತ್ತರಾದ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳು ಡಾ.ಚನ್ನಬಸವ ಸ್ವಾಮಿ ಹಿರೇಮಠ ತಮ್ಮ ಸಿಬ್ಬಂದಿಗಳೊಂದಿಗೆ ಗ್ರಾಮಕ್ಕೆ ತೆರಳಿ ಎಲ್ಲಾ ಗ್ರಾಮದ ಸಾರ್ವಜನಿಕರ ಸಮಕ್ಷಮದಲ್ಲಿ ಕರೆ ದುಕೊಂಡು ಬಂದು ಆಶ್ರಮದಲ್ಲಿ ಆಶ್ರಯ ನೀಡಿದರು.
ಊರಿನ ಎಲ್ಲಾ ಗ್ರಾಮಸ್ಥರು ಕಾರುಣ್ಯ ಆಶ್ರಮದ ಸೇವೆ ಶ್ಲಾಘನೀಯ ಇಂತಹ ಒಂದು ಆಶ್ರಮ ನಮ್ಮ ಭಾಗದಲ್ಲಿ ಹುಟ್ಟಿಕೊಂಡಿರುವುದು ನಮ್ಮೆಲ್ಲರ ಪುಣ್ಯ ಈ ಆಶ್ರಮಕ್ಕೆ ಸದಾವಕಾಲ ಸಂತೆಕಲ್ಲೂರಿನ ಗ್ರಾಮಸ್ಥರ ಸಹಾಯ ಸಹಕಾರ ಮಾರ್ಗದರ್ಶನ ನೀಡ ಲಾಗುವುದು. ಪ್ರಾಯದ ವಯಸ್ಸಿನಲ್ಲಿ ಬುದ್ಧಿಮಾಂದ್ಯಳಾದ ಈಕೆಗೆ ಕರುಣಾಮಯಿ ಕಾರುಣ್ಯ ಆಶ್ರಮದಲ್ಲಿ ಆಶ್ರಯ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ ಎಂದು ಆಶ್ರಮದ ಸೇವೆಗೆ ಎಲ್ಲರೂ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಆಶ್ರಮದ ಆಡಳಿತ ಅಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ಈಕೆಯ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಳ್ಳುತ್ತೇವೆ ಪ್ರೀತಿಯ ವಿಳಾಸ ಏನಾದರೂ ದೊರೆತರೆ ಜೊತೆಗೆ ಚಿಕಿತ್ಸೆ ಪಡಿಸಿ ಅವರ ಮನೆಗೆ ಸೇರಿಸುವ ಕಾರ್ಯ ಮಾಡುತ್ತೇವೆ. ಒಂದು ವೇಳೆ ಈಕೆಗೆ ಯಾರೂ ಇಲ್ಲ ಎಂದಾಗ ಮಾತ್ರ ವಿಜಯ ಸಂಪೂರ್ಣ ಜವಾಬ್ದಾರಿಯನ್ನು ಕಾರುಣ್ಯ ಕುಟುಂಬ ವಹಿಸಿಕೊಳ್ಳುತ್ತದೆ. ಒಂದು ತಿಂಗಳುಗಳ ಕಾಲ ಈಕೆಯನ್ನು ರಕ್ಷಣೆ ಮಾಡಿರುವ ಸಂತೆಕಲ್ಲೂರಿನ ಗ್ರಾಮಸ್ಥರಿಗೆ ಕಾರುಣ್ಯ ಆಶ್ರಮದ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ವೆಂಕಟೇಶ ಗೌಂಡಿ ಮಲ್ಲಯ್ಯ ಸ್ವಾಮಿ ಹಾಗೂ ಆಶ್ರಮದ ಸಿಬ್ಬಂದಿಗಳಾದ ಮರಿಯಪ್ಪ ಹರಿಷವರ್ಧನ ಕರಿಯಪ್ಪ ಮತ್ತು ಊರಿನ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು
