ಉದಯವಾಹಿನಿ ಇಂಡಿ : ಪಟ್ಟಣದ ಪುರಸಭೆ ಆಧೀನದಲ್ಲಿರುವ ಸಾತಪುರ ಗ್ರಾಮದ ಮತ್ತು ಸುತ್ತಮುತ್ತಲಿನ ಅಡವಿ ವಸತಿ ರೈತರು ರೈತ ಜಮೀನುಗಳಿಗೆ ನಿರಂತರ ಐದು ಗಂಟೆ ವಿದ್ಯುತ್ ಸಂಪರ್ಕ ಕಲ್ಪಸಿ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.ಮಾಳಪ್ಪ ಗುಡ್ಲ, ಶರತಗೌಡ ಪಾಟೀಲ, ಪದ್ಮಣ್ಣ ಗುಡ್ಲ, ಹಣಮಂತಗೌಡ ಗುಡ್ಲ, ಅಶೋಕ ಅಕಲಾದಿ, ಸುರೇಶ ಕೋಳೆಕರ ಮಾತನಾಡಿ ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಕಡಿಮೆ ವೋಲ್ಟೇಜ್ ನೀಡುವದರಿಂದ ಬೋರುಗಳಿಂದ ನೀರು ಬರುತ್ತಿಲ್ಲ ಮತ್ತು ಭಾವಿಗಳ ಮೋಟಾರುಗಳು ಸುಡುತ್ತಿವೆ. ಈ ಮೊದಲು ಹಗಲು ನಾಲ್ಕು ತಾಸು ರಾತ್ರಿ ೩ ತಾಸು ವಿದ್ಯುತ್ ನೀಡುತ್ತಿದ್ದರು. ಈಗ ಎರಡು ಗಂಟೆ ಕೂಡ ವಿದ್ಯುತ್ ನೀಡುತ್ತಿಲ್ಲ. ಇದರಿಂದ ರೈತರ ಬೆಳೆಗಳು ಒಣಗುತ್ತಿವೆ. ಇತ್ತ ಮಳೆಯೂ ಕೂಡ ಬರದೆ ರೈತರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದರು. ಕಾರಣ ಹಗಲು ಹೊತ್ತು ನಿರಂತರ ಐದು ಗಂಟೆ ನೀಡಬೇಕು. ಈಗಾಗಲೇ ಸರಕಾರ ನಿರಂತರ ಐದು ಗಂಟೆ ವಿದ್ಯುತ್ ನೀಡಲು ಒಪ್ಪಿಕೊಂಡಿದೆ ಎಂದರು.ಮನವಿ ಸ್ವೀಕರಿಸಿ ಮಾತನಾಡಿದ ಎಇಇ ಎಸ್.ಆರ್.ಮೆಂಡೆಗಾರ ನಾಳೆಯಿಂದಲೇ ಹಗಲು ಮೂರು ತಾಸು ಮತ್ತು ರಾತ್ರಿ ಎರಡು ತಾಸು ವಿದ್ಯುತ್ ನೀಡುವದಾಗಿ ತಿಳಿಸಿದರು.ಪಟ್ಟು ಬಿಡದ ರೈತರು ನಿರಂತರ ಹಗಲು ಹೊತ್ತು ಐದು ತಾಸು ನೀಡಲು ಪ್ರತಿಭಟನೆ ಮುಂದುವರೆಸಿದರು.ಮೇಲಾಧಿಕಾರಿಗಳ ಒಪ್ಪಿಗೆ ಪಡೆದು ನೀಡುವದಾಗಿ ಭರವಸೆ ನೀಡಿದರು.ಅದಲ್ಲದೆ ಸೆಕ್ಸೆನ್ ಅಧಿಕಾರಿ ರೈತರ ಕರೆಗಳನ್ನು ಸ್ವೀಕರಿಸುವದಿಲ್ಲ, ರೈತರ ಸಮಸ್ಯೆಗೆ ಸ್ಪಂದಿಸುವದಿಲ್ಲ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಸಯಿದಪ್ಪ ವಾಲಿಕಾರ, ಸೋಮಣ್ಣ ಗುಡ್ಲ, ಸತ್ತೆಪ್ಪ ಅಹಿರಸಂಗ, ಲಾಯಪ್ಪ ಅಹಿರಸಂಗ, ಶಿವಯೋಗಪ್ಪ ಸಾತಲಗಾಂವ, ಯಲ್ಲಪ್ಪ ಸಾತಲಗಾಂವ, ಬಾಬು ವಾಲಿಕಾರ, ಶ್ರೀಮಂತ ಕರ್ಜಗಿ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!