
ಉದಯವಾಹಿನಿ,ಚಿಂಚೋಳಿ: ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿನೀಡಿ ಕೆ-ಕಿಸಾನ್ ತಂತ್ರಾಂಶದಲ್ಲಿ ಎಫ್.ಐ.ಡಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕೆಂದು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟನೆ ಹೊರಡಿಸಿದ ಅವರು,ರೈತರು ಕೃಷಿ ಇಲಾಖೆಯಿಂದ ಸಹಾಯಧನದಡಿ ಪಡೆಯುವ ಬಿತ್ತನೆ ಬೀಜ, ಯಂತ್ರೋಪಕರಣಗಳು, ಸ್ಪ್ರಿಂಕ್ಲರ್ , ಡ್ರೀಪ್, ರಸಗೊಬ್ಬರ, ಔಷಧ,ಇತರೆ ಅನೇಕ ಪರಿಕರಗಳು ಪಡೆಯಬೇಕಾದಲ್ಲಿ ಕೆ-ಕಿಸಾನ್ ತಂತ್ರಾಂಶಗಳಲ್ಲಿ ರೈತರ ವಿವರಗಳನ್ನು ದಾಖಲಿಸಬೇಕು. ಸರ್ಕಾರದಿಂದ ದೊರೆಯುವ ಬರ ಪರಿಹಾರ,ತೊಗರಿ ನೆಟೆರೋಗದ ಪರಿಹಾರ,ಇತರೆ ಪರಿಹಾರ ಧನವನ್ನು ರೈತರಿಗೆ ದೊರೆಯಬೇಕಾದರೆ ತಂತ್ರಾಂಶದಲ್ಲಿ ಎಫ್.ಐ.ಡಿ ಮಾಡಿಸಿಕೊಳ್ಳಿ ಪರಿಹಾರ ನೀಡಲು ಬರುತ್ತದೆ ಇಲ್ಲಾದಿದ್ದರೆ ಬರುವುದಿಲ್ಲ,ಪರಿಶೀಷ್ಟ ಜಾತಿ ಮತ್ತು ಪರಿಶೀಷ್ಟ ಪಂಗಡ ರೈತರು ಹೊಸದಾಗಿ ಪಡೆದಿರುವ ಜಾತಿ ಪ್ರಮಾಣಪತ್ರ ಆರ್.ಡಿ.ಸಂಖ್ಯೆ ತಂತ್ರಾಂಶದಲ್ಲಿ ನಮೂದಿಸದ ರೈತರು ಕಡ್ಡಾಯವಾಗಿ ನಮೂದಿಸಿ ನವೀಕರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
