ಉದಯವಾಹಿನಿ ದೇವರಹಿಪ್ಪರಗಿ: ಪಟ್ಟಣದಲ್ಲಿ ದಸರಾ ಸಂಭ್ರಮ ಕಳೆಕಟ್ಟಿದ್ದು, ನಾಡದೇವಿ ಉತ್ಸವಕ್ಕೆ ಸಡಗರ ಮತ್ತು ಸಂಭ್ರಮದ ಚಾಲನೆ ದೊರೆತಿದೆ.ಪಟ್ಟಣದ ಕೆಇಬಿ ಹತ್ತಿರ ನಾಡ ದೇವಿಗೆ ಜಡೆ ಮಠದ ಶ್ರೀ ಜಡೆ ಸಿದ್ದೇಶ್ವರ ಶಿವಾಚಾರ್ಯರು ಹಾಗೂ ಪರದೇಶಿ ಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಪೂಜೆ ಸಲ್ಲಿಸುವ ಮೂಲಕ ನಾಡದೇವಿ ಉತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇವರ ಹಿಪ್ಪರಗಿ ಪಟ್ಟಣದ ನಾಡದೇವಿ ಉತ್ಸವ ಕಮಿಟಿ ಹಮ್ಮಿಕೊಂಡ ದಸರಾ ಉತ್ಸವಕ್ಕೆ  ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪ್ರಭುಗೌಡ ಲಿಂಗದಳ್ಳಿ (ಚಬನೂರ), ಬಿಜೆಪಿ ಮುಖಂಡರಾದ ಸಂಗನಗೌಡ ಪಾಟೀಲ ಸಾಸನೂರ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಪಟ್ಟಣದ ಬುದ್ನಿ ಅವರ ಓಣಿಯಲ್ಲಿ ಪ್ರತಿಷ್ಠಾಪಿಸಲಾಯಿತು. ದಸರಾ ವೈಭವಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ನೂರಾರು ಜನ ಸಾಕ್ಷಿಯಾದರು. ನವರಾತ್ರಿಯ ಐದು ದಿನದ ಉತ್ಸವಕ್ಕೆ ಗುರುವಾರದಿಂದ ಅಧಿಕೃತ ಚಾಲನೆ ದೊರೆತಿದ್ದು, ವಿಜಯದ ದಶಮಿಯವರೆಗೆ ದೇವಿಯ ಮೂರ್ತಿಗೆ ವಿವಿಧ ಪೂಜೆ ಪುನಸ್ಕಾರಗಳು ನಡೆಯಲಿವೆ.ಐದು ದಿನಗಳ ಕಾಲ ಸಂಸ್ಕೃತಿಕ ಜಾನಪದ ಹಾಗೂ ಅನ್ನ ಸಂತರ್ಪಣ ಕಾರ್ಯಕ್ರಮಗಳು ನಡೆಯಲಿವೆ.ಇದೇ ಸಂದರ್ಭದಲ್ಲಿ ಪ.ಪಂ ಸದಸ್ಯರುಗಳಾದ ರಮೇಶ ಮಸಿಬಿನಾಳ,ಡಾ. ಗುರುರಾಜ ಗಡೇದ,ಸೋಮು ದೇವೂರ, ಉಸ್ತವ ಕಮಿಟಿಯ ಅಧ್ಯಕ್ಷರಾದ ಕಲ್ಮೇಶ್ ಬುದ್ನಿ, ರಾಘವೇಂದ್ರ ಕುಲಕರ್ಣಿ, ದಿನೇಶಗೌಡ ಪಾಟೀಲ, ಮಡುಗೌಡ ಬಿರಾದಾರ, ದರ್ಶನ್ ನಾಡಗೌಡ, ಸಾಹೇಬಗೌಡ ಬಿರಾದಾರ, ವೀರೇಶ್ ಬುದ್ನಿ, ಪಿಂಟು ಬಾಸತಕರ್, ಪಿಂಟು ಬುದ್ನಿ, ಚೇತನ್ ಇಂಡಿ, ನಿಂಗು ನಾಗರಹಳ್ಳಿ, ಶಿವರಾಜ ತಳವಾರ ‌ಸೇರಿದಂತೆ ಉತ್ವವ ಕಮಿಟಿಯ ಪದಾಧಿಕಾರಿಗಳು ಹಾಗೂ ಪಟ್ಟಣದ ಪ್ರಮುಖರು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!