ಉದಯವಾಹಿನಿ, ವಾಷಿಂಗ್ಟನ್: ಭಾರತದಲ್ಲಿ ಸಲಿಂಗ ಕಾಮ ಮಾನ್ಯತೆ ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅಮೇರಿಕಾ, ಸಲಿಂಗ ದಂಪತಿಗಳಿಗೆ ಸಮಾನ ಕಾನೂನು ರಕ್ಷಣೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಭಾರತಕ್ಕೆ ಸಲಹೆ ನೀಡಿದೆ.ಭಾರತದಲ್ಲಿ ಸಲಿಂಗ ವಿವಾಹ ಉತ್ತೇಜಿಸಲು ಮತ್ತು ವಿವಾಹವನ್ನು ಕಾನೂನುಬದ್ಧಗೊಳಿಸಲು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ” ಎಂದು ಅಮೇರಿಕಾ ಹೇಳಿದೆ.
ಅಮೇರಿಕಾ ಜಾಗತಿಕವಾಗಿ ವಿವಾಹ ಸಮಾನತೆಯನ್ನು ಬೆಂಬಲಿಸುತ್ತದೆ” ಎಂದು ಅಮೇರಿಕಾದ ಗೃಹ ಇಲಾಖೆಯ ವಕ್ತಾರರು ಹೇಳಿದ್ದು “ನ್ಯಾಯಾಲಯದ ತೀರ್ಪಿನ ನಂತರ ಈ ವಿಷಯದ ಬಗ್ಗೆ ಸರ್ಕಾರ ಮತ್ತು ನಾಗರಿಕ ಸಮಾಜದ ಪ್ರತಿಕ್ರಿಯೆಗಳಿಂದ ಅನುಸರಿಸುವ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
