ಉದಯವಾಹಿನಿ, ನ್ಯೂಯಾರ್ಕ್: ಚೀನಾದ ಪರಮಾಣು ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದಂತೆ ಅಮೆರಿಕಾ ಇದೀಗ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ಚೀನಾ ಕಳೆದ ಹಲವು ವರ್ಷಗಳಿಂದ ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಸದ್ಯ ಇದರ ಸಂಖ್ಯೆ ಸದ್ಯ ೫೦೦ಕ್ಕೆ ಏರಿಕೆಯಾಗಿದೆ ಎಂದು ಅಮೆರಿಕಾದ ಪೆಂಟಗನ್ (ಮಿಲಿಟರಿ ವಿಭಾಗ) ಬಿಡುಗಡೆ ಮಾಡಿದ ವಾರ್ಷಿಕ ವರದಿ ತಿಳಿಸಿದೆ. ಸದ್ಯ ಚೀನಾ ವೇಗವಾಗಿ ತನ್ನ ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ವೃದ್ದಿಸಿಕೊಳ್ಳುತ್ತಿದ್ದು, ೨೦೩೦ರ ವೇಳೆಗೆ ಸುಮಾರು ೧ ಸಾವಿರ ಸಿಡಿತಲೆಗಳನ್ನು ಹೊಂದುವ ಯೋಜನೆ ಹಾಕಿಕೊಂಡಿದೆ ಎಂದು ಪೆಂಟಗಾನ್ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಇನ್ನು ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ, ರಷ್ಯಾ ಸುಮಾರು ೫,೮೮೯ ಸಿಡಿತಲೆಗಳ ಪರಮಾಣು ಶಸ್ತ್ರಾಗಾರವನ್ನು ಹೊಂದಿದ್ದರೆ ಯುಎಸ್ ಬಳಿ ೫,೨೪೪ ಸಂಖ್ಯೆಗಳನ್ನು ಹೊಂದಿದೆ. ಹಾಗಾಗಿ ಈ ಎರಡೂ ದೇಶಗಳ ಪರಮಾಣು ಸಿಡಿತಲೆಗಳಿಗೆ ಹೋಲಿಕೆ ಮಾಡಿದರೆ ಚೀನಾ ಸ್ವಲ್ಪ ಪ್ರಮಾಣದಲ್ಲೇ ಅಣ್ವಸ್ತ್ರಗಳನ್ನು ಹೊಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!