ಉದಯವಾಹಿನಿ, ವಾಷಿಂಗ್ಟನ್: ಹಮಾಸ್ ಉಗ್ರರ ವಿರುದ್ಧ ಮತ್ತಷ್ಟು ದಾಳಿ ನಡೆಸಲು ಇಸ್ರೇಲ್‌ಗೆ ಇನ್ನಷ್ಟು ಮಿಲಿಟರಿ ಸಹಾಯ ಒದಗಿಸುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ನಿರ್ಧಾರದ ವಿರುದ್ಧ ಈಗಾಗಲೇ ಅಸಮಾಧಾನ ಮೂಡಿದೆ. ಬೈಡೆನ್ ನಿರ್ಧಾರದ ಕಳವಳ ವ್ಯಕ್ತಪಡಿಸಿ, ಅಲ್ಲಿನ ಬ್ಯೂರೋ ಆಫ್ ಪೊಲಿಟಿಕಲ್ ಅಫೇರ್ಸ್ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಘಟನೆ ನಡೆದಿದೆ.
ಜೋಶ್ ಪೌಲ್ ರಾಜೀನಾಮೆ ನೀಡಿದ ಅಧಿಕಾರಿ. ಇಸ್ರೇಲ್-ಹಮಾಸ್ ಯುದ್ಧದ ನಡುವೆ ಹಾಗೂ ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಸತತ ದಾಳಿಗಳ ನಡುವೆ ಇಸ್ರೇಲ್‌ಗೆ ಇನ್ನಷ್ಟು ಮಿಲಿಟರಿ ಸಹಾಯ ಒದಗಿಸುವ ಬೈಡನ್ ಆಡಳಿತದ ನಿರ್ಧಾರದ ಕುರಿತು ಕಳವಳ ವ್ಯಕ್ತಪಡಿಸಿ ಜೋಶ್ ಪೌಲ್ ರಾಜೀನಾಮೆ ನೀಡಿದ್ದಾರೆ. ಅವರು ಕಳೆದ ೧೧ ವರ್ಷಗಳಿಂದ ಈ ಹುದ್ದೆಯಲ್ಲಿದ್ದರು. ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್‌ನ ಅಮೆರಿಕಾ ಬೆಂಬಲಿತ ಪ್ರತಿಕ್ರಿಯೆಯು ಇಸ್ರೇಲಿಗಳು ಮತ್ತು ಫೆಲೆಸ್ತೀನೀಯರಿಗೆ ಇನ್ನಷ್ಟು ಕಷ್ಟಗಳನ್ನು ತಂದೊಡ್ಡಲಿದೆ ಎಂದು ಪೌಲ್ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷ ಕುರಿತಂತೆ ಬೈಡನ್ ಆಡಳಿತ ಮತ್ತು ಅಮೆರಿಕಾದ ಕಾಂಗ್ರೆಸ್‌ನ ಹೆಚ್ಚಿನವರ ಪ್ರತಿಕ್ರಿಯೆಯ ಬಗ್ಗೆಯೂ ಟೀಕಿಸಿದ ಅವರು ಅದು ಬೌದ್ಧಿಕ ದಿವಾಳಿತನದಿಂದ ಕೂಡಿದೆ ಎಂದರಲ್ಲದೆ ದೂರದೃಷ್ಟಿಯಿಲ್ಲದ ವಿನಾಶಕಾರಿ ಮತ್ತು ಅನ್ಯಾಯಯುತ ನೀತಿಗೆ ಬೆಂಬಲದೊಂದಿಗೆ ಕೆಲಸ ಮಾಡಲು ತಮ್ಮಿಂದ ಸಾಧ್ಯವಿಲ್ಲ.
