ಉದಯವಾಹಿನಿ, ಮಾಲೂರು: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಎನ್.ಎಸ್.ಎಸ್ ಘಟಕದ ವಿಶೇಷ ಶಿಬಿರದ ದತ್ತು ಗ್ರಾಮವಾದ ಮಡಿವಾಳ ಪಂಚಾಯ್ತಿಯ ಗಂಗಾಪುರ ಗೇಟ್ ಬಳಿಯ ರಾಘವೇಂದ್ರ ಗೋ ಆಶ್ರಮದಲ್ಲಿ ೫೦ ಶಿಬಿರಾರ್ಥಿಗಳಿಂದ ಶ್ರಮದಾನವನ್ನು ನಡೆಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಎಲ್.ಆನಂದರೆಡ್ಡಿ, ಭಾಗವಹಿಸಿ ಮಾತನಾಡಿ ಕಾಲೇಜು ವಿದ್ಯಾರ್ಥಿಗಳು ವ್ಯಾಸಂಗದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಭೇಕು. ೭ದಿನಗಳ ಶಿಬಿರದಲ್ಲಿ ಶಿಬಿರಾರ್ಥಿಗಳು ಭಾಗವಹಿಸುವುದರಿಂದ ಸೇವಾ ಮನೋಭಾವ, ನಾಯಕತ್ವದ ಗುಣಗಳು ವೃದ್ಧಿಯಾಗುವುದರೊಂದಿಗೆ ಸಹಕಾರ, ಸೌಹಾರ್ದತೆಯ ಮನೋಭಾವವನ್ನು ಮೈಗೂಡಿಸಿಕೊಳ್ಳಬಹುದು ವಿದ್ಯಾರ್ಥಿಗಳು ಎನ್.ಎಸ್.ಎಸ್ ನಂತಹ ಶಿಬಿರಗಳಲ್ಲಿ ಭಾಗವಹಿಸಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಉತ್ತಮ ರೀತಿಯ ಪ್ರಜೇಗಳಾಗುವಂತೆ ಹೇಳಿದರು. ಈ ಕಾರ್ಯಕ್ರಮದಲ್ಲಿ ಎಂ.ಪಿ.ಚಂದ್ರಶೇಖರ್ ತಬಲ ಅಪ್ಪಿ, ಶಿಬಿರಾಧಿಕಾರಿಗಳಾದ ನಾಗರಾಜು ಬಿ ಎಸ್, ಹಿರಿಯ ಉಪನ್ಯಾಸಕರಾದ ಡಾ.ಜಿ.ಹನುಮಪ್ಪ, .ಕೆ.ರವೀಂದ್ರ, ಎನ್ ಎನ್ ಶಂಕರಪ್ಪ, ಅರುಣ್, ಜಸ್ಟಿನ್ ಅಲೋಕ್ ರವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!