ಉದಯವಾಹಿನಿ,ಬಂಗಾರಪೇಟೆ:ಕಂದಾಯ ಇಲಾಖೆಯ ಅಧಿಕಾರಿಗಳು ಭೂ ಮಾಫಿಯಾ ಪರ ನಿಂತು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಗುಟ್ಟಹಳ್ಳಿ ಎಂ. ಶ್ರೀನಿವಾಸ್ ಆಗ್ರಹಿಸಿದರು
ಜಿಲ್ಲಾಧಿಕಾರಿಗಳ ಕಚೇರಿಯ ಎದುರು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ
ಮತ್ತು ಸಮತಾ ಸೈನಿಕ ದಳ ಸಹಯೋಗದಲ್ಲಿ ಹಾಗೂ ಜಿಲ್ಲಾಧ್ಯಕ್ಷ ಗುಟ್ಟಳ್ಳಿ ಎಂ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ತಮಟೆ ಚಳುವಳಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಅಧಿಕಾರಿ ವರ್ಗ ದೀನ ದಲಿತರ. ಬಡವರ. ರೈತರ. ಕಾರ್ಮಿಕ. ಮತ್ತು ಶ್ರಮಿಕ ವರ್ಗದ ಪರವಾಗಿ ಕೆಲಸ ಮಾಡದೆ ಭೂ ಮಾಫಿಯಾದವರ ಬೆಂಬಲಕ್ಕೆ ನಿಂತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ಸಂಪಾದನೆಯಲ್ಲಿ ನಿರತ ವಾಗಿರುವುದು ಖಂಡನೀಯ, ಹಾಗೂ ತಶೀಲ್ದಾರ್ ರಶ್ಮಿ ರವರು ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ದಲಿತ ವಿರೋಧ ಭಾಸವನ್ನು ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
