
ಉದಯವಾಹಿನಿ ದೇವರಹಿಪ್ಪರಗಿ: ಪಟ್ಟಣದ ನಗರೋತ್ಥಾನ ಹಂತ-4ರ ಪ. ಪಂ.ವ್ಯಾಪ್ತಿಯಲ್ಲಿ ಬರುವ ಸಿ.ಸಿ. ರಸ್ತೆ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣ ಪಂಚಾಯಿತಿಗೆ ಶುಕ್ರವಾರದಂದು ದಿಢೀರ್ ಭೇಟಿ ನೀಡಿ ಪ.ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಟ್ಟಣದ ವಾರ್ಡ್ ನಂ-01,08,11ರಲ್ಲಿ ನಡೆದ ಸಿ.ಸಿ ರಸ್ತೆಗಳನ್ನು ಪರಿಶೀಲನೆ ನಡೆಸಿದ್ದೇನೆ. ಬೇರೆ ತಾಲೂಕುಗಳಲ್ಲಿ ಕೆಲ ನ್ಯೂನ್ಯತೆ ಕಂಡುಬಂದಿದ್ದು, ಆದರೆ ಪಟ್ಟಣದಲ್ಲಿ ಸರ್ಕಾರದ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದು ಗುಣಮಟ್ಟದ ಕಾಮಗಾರಿಗಳಾಗಿವೆ. ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ ಹಂತ-4ರ 2ಕೋಟಿ7ಲಕ್ಷ ರೂ ವೆಚ್ಚದ ಕಾಮಗಾರಿಗಳನ್ನು ಆದಷ್ಟು ಬೇಗ ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಯೋಜನಾ ನಿರ್ದೇಶಕರಾದ ವಿಜಯ ಮೆಕ್ಕಳಕಿ, ತಹಶೀಲ್ದಾರ್ ಪ್ರಕಾಶ ಸಿಂದಗಿ, ಕಂದಾಯ ನಿರೀಕ್ಷಕ ಎಸ್.ಎ.ಗುಮಾಸ್ತೆ,ಎಇಇ ಅನಿಲಕುಮಾರ ಮುದ್ದಾ, ಜಗದೀಶ ನಾರಾಯಣಕರ್,ಪ. ಪಂ. ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ,ಪ.ಪಂ.ಸದಸ್ಯರಾದ ಬಸೀರ ಅಹ್ಮದ್ ಬೇಪಾರಿ,ಜೈಇ ಗುರುರಾಜ ಬಿರಾದಾರ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಸಿಬ್ಬಂದಿಗಳಾದ ಮುತ್ತುರಾಜ ಹಿರೇಮಠ ಸೋಮಶೇಖರ ಭೋವಿ ಸೇರಿದಂತೆ ಹಲವಾರು ಮುಖಂಡರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
