ಉದಯವಾಹಿನಿ ಇಂಡಿ : ಲಿಂಬೆ ನಾಡಿನ ಹಲವು ತಾಲೂಕು ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ ಭೂಬಾಲನ ಅನೀರಿಕ್ಷಿತ ಬೇಟಿ ನೀಡಿ ಶುಕ್ರವಾರ ಪರಿಶೀಲನೆ ನಡಸಿದ್ದರು .ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನಗೆ ಬೇಟಿ ನೀಡಿ ಅಲ್ಲಿನ ಆಹಾರದ ಗುಣಮಟ್ಟ ಪರಶೀಲನೆ ಮತ್ತು ಮೇಗಾ ಮಾರುಕಟ್ಟೆ. ಸಾರ್ವಜನಿಕ ಸರಕಾರಿ ಆಸ್ಪತ್ರೆ ಪರಿಶೀಲನೆ ಮಾಡಿದರು. ಹಾಗೂ ಪುರಸಭೆ ಕಾರ್ಯಾಲಯಕ್ಕೆ ಹಾಗೂ ತಾಲೂಕು ಆಡಳಿತ ಸೌಧಕ್ಕೆ ತೆರಳಿ, ಸಂಪೂರ್ಣ ಕಛೇರಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲನೆ ಮಾಡಿದರು. ತದನಂತರ ತಹಶಿಲ್ದಾರ ಕಾರ್ಯಾಲಯದಲ್ಲಿ ಸಂಬಂಧಿಸಿದ ನೌಕರಸ್ಥರು ಮತ್ತು ಸಿಬ್ಬಂದಿ ವರ್ಗದವರ ಜೊತೆ ಅಲ್ಲಿರುವ ಸಮಸ್ಯೆ ಮತ್ತು ಇಲಾಖೆಯ ಪ್ರಗತಿಯ ಬೆಳವಣಿಗೆ ಬಗ್ಗೆ ಗಮನ ಹರಿಸಿದರು. ಇನ್ನೂ ಇದೇ ಸಂದರ್ಭದಲ್ಲಿ ತಾಲೂಕಾ  ಶಾಂತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ ಹಾಗೂ ಕರವೇ ಅಧ್ಯಕ್ಷ ಶೀವು ಮಲಕಗೊಂಡ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿರುವ ನೀರಿನ ಸಮಸ್ಯೆ ಹಾಗೂ ಡಿಲೆವರಿಗೆ ಬರುವ ಮಹಿಳೆಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಮತ್ತು ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿಸುವ ಸೌಲಭ್ಯ ಕುರಿತು  ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅದಲ್ಲದೇ ರೇವಪ್ಪ ಮಡ್ಡಿ ರಸ್ತೆ, ಚರಂಡಿ ಇಲ್ಲದೇ ಗಬ್ಬೆದ್ದು ನಾರುತ್ತಿದೆ. ಅಲ್ಲಿ ಯಾರೂ ಕಾಳಜಿ ವಹಿಸದಂತಾಗಿದೆ. ಆ ರೇವಪ್ಪ ಮಡ್ಡಿ ಹೊಸದೊಂದು ವಾರ್ಡವಾಗಿ ಪರಿವರ್ತಸಿದ್ರೆ ಮುಂಬರುವ ಸದಸ್ಯರು ಅತೀ ಕಾಳಜಿವಹಿಸಬಹುದು ಎಂದು ಹೇಳಿದರು. ಮುಂಬರುವ ಡಿ ಲಿಮೆಟೆಷನ್ ಸಂದರ್ಭದಲ್ಲಿ ಸರಿಪಡಿಸುವ ಭರವಸೆ ಜಿಲ್ಲಾ ಅಧಿಕಾರಿಗಳು ನೀಡಿದರು.ಈ ಸಂದರ್ಭದಲ್ಲಿ ತಹಶಿಲ್ದಾರ ಬಿ ಎಸ್ ಕಡಕಭಾವಿ, ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ಶಿರಸ್ತೆದಾರ ಆರ್ ಮೂಗಿ, ಮುಜಗೊಂಡ ಇನ್ನೂ ಅನೇಕ ಸಿಬ್ಬಂದಿ ವರ್ಗದವರು  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!