ಉದಯವಾಹಿನಿ,ಅಫಜಲಪುರ : ತಾಲೂಕಿನ ಚೌಡಾಪುರ ಗ್ರಾಮದ ರಾಜ್ಯ ಹೆದ್ದಾರಿ ತಡೆದು ಭೀಮ ಅಮರ್ಜಾ ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಭೀಮಾ-ಅಮರ್ಜಾ ರೈತ ಸಂಘದ ತಾಲೂಕು ಅಧ್ಯಕ್ಷ ಅಣ್ಣಾರಾವ್ ಪಾಟೀಲ, ರೈತರು ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಈಗಿನ ಸರಕಾರ ರೈತರ ಬೆನ್ನೆಲುಬು ಮುರಿಯುತ್ತಿದ್ದಾರೆ.ದಿನದಲ್ಲಿ 5 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಾರೆ.ಅದು ರಾತ್ರಿ ಹೊತ್ತು ಕರೆಂಟ್ ನೀಡುತ್ತಾರೆ.ಐದು ಗಂಟೆಯಲ್ಲಿ ಹತ್ತು ಬಾರಿ ಕರೆಂಟ್ ತೆಗೆಯುತ್ತಾರೆ. ರೈತರು ಬೆಳೆ ಬೆಳೆಯುವುದಿರಲಿ,ದನಕರುಗಳಿಗೆ ಕುಡಿಯಲು ನೀರು ಸಂಗ್ರಹಣೆ ಮಾಡಲು ಆಗುತ್ತಿಲ್ಲ ಎಂದು ದುಃಖಿತರಾಗಿ ಮಾತನಾಡಿದರು. ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳಿವೆ.ಅವುಗಳಿಂದ ಬರುವ ತಾಜ್ಯವನ್ನು ಭೀಮಾ ನದಿಗೆ ಹರಿಬಿಡುತ್ತಾರೆ.ಇದರಿಂದ ಭೀಮಾ ನದಿ ಸಂಪೂರ್ಣವಾಗಿ ಕಲುಷಿತವಾಗಿ ವಿಷಕಾರಿಯಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ರೋಗಗಳು ಬರುತ್ತಿವೆ. ಮಳೆ ಇಲ್ಲದೇ ಬರಗಾಲದ ಸಂಕಷ್ಟಕ್ಕೆ ಸಿಲುಕಿದ ನಮಗೆ,ಗಾಯದ ಮೇಲೆ ಬರೆ ಎಳೆದಂತೆ ಸರಕಾರವೂ ನಮ್ಮ ಮೇಲೆ ಬಲ ಪ್ರಯೋಗ ಮಾಡುತ್ತಿದೆ ಎಂದರು. ಈಗಾಗಲೇ ಭೀಮೆಯ ಒಡಲು ಭತ್ತಿ ಹೊಗುತ್ತಿದೆ.ಕೂಡಲೇ ಭೀಮಾ ನದಿಗೆ ನೀರು ಹರಿಸಬೇಕು ಎಂದರು. ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು. ರಾಜ್ಯ ಹೆದ್ದಾರಿ ತಡೆಯಿಂದ  ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲದೇ ರೈತ ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾದವು ನಡೆಯಿತು‌.ಸ್ಥಳಕ್ಕೆ ಖುದ್ದಾಗಿ ತಹಶೀಲ್ದಾರರು ಬಂದು ಮನವಿ ಸ್ವೀಕರಿಸಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದರಿಂದ ಸ್ಥಳಕ್ಕೆ ತಹಶೀಲ್ದಾರ ಸಂಜುಕುಮಾರ ದಾಸರ ಅವರು ಬಂದು ಮನವಿ ಸ್ವೀಕರಿಸಿದರು.ಇದೆ ಸಂದರ್ಭಗಳಲ್ಲಿ ರೈತ ಮುಖಂಡರಾದ ಯಲ್ಲಪ್ಪ ಕೋಣ ಸಿರಸಗಿ,ಶಿವರಾಯ ಚಿಂಚೋಳಿ,ವಿಠ್ಠಲ್ ಕಿರಸಾವಳಗಿ,ಅವದೂತ ಗಾಣಗಾಪುರ, ಭೂತಾಳಿ ಜಮಾದಾರ,ಯಲ್ಲಪ್ಪ ಬಟಗೇರಿ,ಶರಣಗೌಡ ಸೊಮಾಣಿ,ದಿಗಂಬರ ಕಾಡಪಗೋಳ,ದೌಲತರಾಯಗೌಡ ಬಟಗೇರಿ,ಸಿದ್ದಣ್ಣಗೌಡ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!