ಉದಯವಾಹಿನಿ,ಕೆಂಭಾವಿ: ಪಟ್ಟಣಕ್ಕೆ ಅವಶ್ಯವಿರುವ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಿ ಕೊಡಬೇಕೆಂದು ನಾಗರಿಕರು ಸೇರಿ ಉಪತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಯುವ ಮುಖಂಡರಾದ ಆರೀಫ್ ಸಾಸನೂರ್ ಯಾದಗಿರಿ ಜಿಲ್ಲೆಯಲ್ಲಿಯೇ  ದೊಡ್ಡ ಹೋಬಳಿ ಪಟ್ಟಣವಾಗಿರುವ ಕೆಂಭಾವಿ ಈಗಾಗಲೇ ಪುರಸಭೆಯಾಗಿ ಎಂಟು ವರ್ಷಗಳು ಕಳೆದು ಹೋಗಿವೆ. ಮೂಲಭೂತ ಸೌಕರ್ಯಗಳು ಜೊತೆಗೆ ಅಭಿವೃದ್ಧಿ ಪಥದಲ್ಲಿ ಸಾಗಲು ಕೆಂಭಾವಿ ಪಟ್ಟಣದ ನಾಗರಿಕ ಬಂಧುಗಳು ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಉಸ್ತುವಾರಿ ಮಂತ್ರಿಗಳು ಬೇಗನೆ ಈಡೇರಿಸಬೇಕು. ಒಂದು ವೇಳೆ ಸದರಿ ಬೇಡಿಕೆಗಳಿಗೆ ಸರಕಾರವು ಸ್ಪಂಧನೆ ನೀಡದಿದ್ದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ನಾಗರೀಕರಿಗೆ ಸರಿಯಾದ ಸೌಲಭ್ಯ ನೀಡದ ಕಾರಣ, ಮತದಾನ ಬಹಿಷ್ಕಾರಕ್ಕೆ ಕರೆ ನೀಡಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಗುರುರಾಜ, ತಿಳಗೂಳ, ಆರೀಫ ಸಾಸನೂರು, ಬಸವರಾಜ ಅಂಗಡಿ, ಸಿದ್ದಣ್ಣ ಮಾಳಹಳ್ಳಿಕರ್, ಬಂದೇನವಾಜ ನಾಲತವಾಡ, ಕೆಂಚಪ್ಪ ಪೂಜಾರಿ, ಶಫೀಕ್ ದಫೇದಾರ, ರಮೇಶ ಸ್ವಾಮಿ, ಜಮೀಲ್ ಖಲೀಪಾ, ಶರಣಪ್ಪ ವಡ್ಡರ, ಯಾ ಯಾವಡಕೇರಿ, ಕಂದೀಲ್ ರಂಗಪ್ಪ, ಲಕ್ಷಣ ಬಸರಿಗಿಡ. ಮಹಬೂಬ ಆಂದೇಲಿ, ಎಸ್. ಕೆ. ಮಹಮ್ಮದ್‌, ರಫೀಕ್, ಮೈಬೂಬ್ ಕಾಚು‌, ಬಾಬಾ ತಾಳಿಕೋಟಿ ಸುರೇಶ್ ಮಾಳಳ್ಳಿಕರ, ಪರಶುರಾಮ್ ಚಿಂಚೋಳಿ, ಜಾವಿದ್ ನಾಶಿ, ಮುತ್ತು  ಕಟ್ಟಿಮನಿ, ಇತರರು ಇದ್ದರು.
ವಿವಿಧ ಬೇಡಿಕೆಗಳು:
* ಆರಕ್ಷಕ ಉಪನಿರೀಕ್ಷಕರ ಪೊಲೀಸ ಠಾಣೆಯನ್ನು ಮೇಲ್ದರ್ಜೆಗೇರಿಸಿ ಪೊಲೀಸ ಇನ್ಸಪೆಕ್ಟರ ಹುದ್ದೆಯನ್ನು ಮಂಜೂರು ಮಾಡುವ ಬಗ್ಗೆ.
* ನಾಡ ತಹಸೀಲ ಕಾರ್ಯಾಲಯವನ್ನು ವಿಶೇಷ ತಹಸೀಲ್ದಾರ ಕಾರ್ಯಾಲಯವನ್ನಾಗಿ ಪರಿವರ್ತಿಸುವ ಬಗ್ಗೆ.
* ಉಪನೊಂದಣಾಧಿಕಾರಿಗಳ (ಸಬ್-ರೆಜಿಸ್ಟ್ರಾರ್) ಕಾರ್ಯಾಲಯ ಮಂಜೂರು ಮಾಡುವ ಬಗ್ಗೆ.
* ಪುರಸಭೆ ಕಾರ್ಯಾಲಯಕ್ಕೆ ಮುಖ್ಯಾಧಿಕಾರಿ ಶ್ರೇಣಿಯ ಅಧಿಕಾರಿಯನ್ನು ನೀಡುವ ಬಗ್ಗೆ.
* ಸರಕಾರಿ ಶಾಲೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬಿ.ಸಿ. ಮತ್ತು ಡಿ ದರ್ಜೆಯ ಹುದ್ದೆಗಳನ್ನು ಭರ್ತಿ ಮಾಡಬೇಕು.
* ಪಟ್ಟಣದಲ್ಲಿರುವ ಅಂಚೆ ಇಲಾಖೆಗೆ ಸ್ವಂತ ಕಟ್ಟಡ ದೊರಕಿಸಿಕೊಡಬೇಕು.
*ಲೋಕಾಯುಕ್ತ ಅಧಿಕಾರಿಗಳಿಂದ ಕೆಂಭಾವಿ ಪಟ್ಟಣದಲ್ಲಿ ನಾಗರೀಕರ ದೂರುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹಾರ ನೀಡಲು ವ್ಯವಸ್ಥೆ ಕಲ್ಪಿಸಿಕೊಡಬೇಕು.
* ಕೆಂಭಾವಿ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವೆಂದು ಮೇಲ್ದರ್ಜೆಗೇರಿಸಬೇಕು.
 *ಯಾಳಗಿ ಗ್ರಾಮಗಳಲ್ಲಿ ಕೃಷ್ಣಾ ಭಾಗ್ಯ ಜಲನಿಗಮಕ್ಕೆ ಜಮೀನುಗಳು ಭೂಸ್ವಾಧೀನವಾಗಿದ್ದು, ಪ್ರಯೋಜನಕಾರಿಯಾಗದ ಜಮೀನುಗಳನ್ನು ಬಡರೈತರಿಗೆ ಮರಳಿ ನೀಡಬೇಕು.

Leave a Reply

Your email address will not be published. Required fields are marked *

error: Content is protected !!