ಉದಯವಾಹಿನಿ,ಇಂಡಿ :  ಪಟ್ಟಣದ ಸೇರಿದಂತೆ ತಾಲೂಕಿನ  ಆರಾಧ್ಯ ದೇವಿ ಅಂಬಾ ಭವಾನಿ ತುಳಜಾಪುರದಲ್ಲಿ ಸಹಸ್ರ ಸಹಸ್ರ ಭಕ್ತ ಸಾಗರದ ಪಾದಯಾತ್ರೆಯ ಮೂಲಕ ತೆರಳುತ್ತಿದ್ದು ರಸ್ತೆಯ ಮೇಲೆ ಎಲ್ಲಿ ನೋಡಿದರೂ ಭಕ್ತರ ಜನಸಾಗರ ಕಾಣುತ್ತೇವೆ.  ಸೀಗೆ ಹುಣ್ಣಿಮೆ ಬಂದರೆ ಸಾಕು ಅಂಬಾ ಭವಾನಿ ಭಕ್ತರಿಗೆ ಸಂಭ್ರಮಮೋ ಸಂಭ್ರಮ.  ವರದಾನಿ ಅಂಬಾ ಭವಾನಿ ದರ್ಶನಕ್ಕೆ ತಂಡೋಪ ತಂಡವಾಗಿ ಭಕ್ತರು ತುಳಜಾಪುರದತ್ತ ಪಾದಯಾತ್ರೆ ಮೂಲಕ ಹೆಜ್ಜೆ ಹಾಕುತ್ತಾರೆ. ಇಂಡಿ ಪಟ್ಟಣದ ಸೇರಿದಂತೆ ಇಂಡಿ ತಾಲೂಕಿನ ತಾಂಬಾ,ಹೋರ್ತಿ,ಝಳಕಿ, ಸೇರಿದಂತೆ ವಿಜಯಪುರ ಪಟ್ಟಣ ಮತ್ತು ತಾಲೂಕಿನ , ಸಿಂದಗಿ, ಆಲಮೇಲ ಹಾಗೂ ದೇವರ ಹಿಪ್ಪರಗಿ ತಾಲೂಕಿನ ಎಲ್ಲ ಗ್ರಾಮಗಳಿಂದ  ಇಂಡಿ ತಾಲೂಕಿನ  ಮೂಲಕ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನ ಪಾದಯಾತ್ರೆಯ ಮೂಲಕ ತೆರಳುತ್ತಿದ್ದಾರೆ.
ಝಳಕಿಯಿಂದ ರಾಷ್ಟೀಯ  ಹೆದ್ದಾರೆಯಲ್ಲಿ ಎರಡು ಹೋಗಲು ಎರಡು ಬರಲು ನಾಲ್ಕು ರಸ್ತೆಗಳಿದ್ದು ಅದರಲ್ಲಿ ಒಂದು ಕಡೆಯ ಎರಡು ರಸ್ತೆ ಬಂದು ಮಾಡಿ ಪಾದಯಾತ್ರೆಗಳಿಗೆ ತೊಂದರೆಯಾಗದoತೆ ಸರಕಾರ ಸಹಕರಿಸುತ್ತದೆ. ಮಾಜಿ ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ಅನೇಕ ಪ್ರಮುಖರು ತಂಡೋಪ ತಂಡವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು.
 ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿರುವ ತುಳಜಾಭವಾನಿ ದೇವಿಗೆ ಕರ್ನಾಟಕದಲೂ ಅಪಾರ ಭಕ್ತರಿದ್ದಾರೆ. ಮನೆಯಲ್ಲಿ ಶುಭ ಕಾರ್ಯಗಳಾದರೆ ತುಳಜಾಪುರಕ್ಕೆ ತೆರಳಿ ಹರಕೆ ತೀರಿಸುವುದು ಈ ಭಾಗದ ಭಕ್ತರ ರೂಢಿ. ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಮನೆಗೆ ಒಬ್ಬರಾದರೂ ತೆರಳಿ ದೇವಸ್ಥಾನದ ದೀಪಗಳಿಗೆ ‘ಎಣ್ಣೆ’ ಸಮರ್ಪಿಸಿ ಬರುವುದು ಸಂಪ್ರದಾಯ.
ಬಡವರು, ಶ್ರೀಮತರು ಎನ್ನದೆ ಜಾತಿ-ಮತ, ಪಂಥ ಭೇದ ವಿಲ್ಲದೆ, ಎಲ್ಲ ವರ್ಗ ದವರು ಅಂಬಾ ಭವಾನಿಯ ದರ್ಶನಕ್ಕಾಗಿ ಕಾಯುತ್ತಾರೆ, ಪಾದಯಾತ್ರೆ ಮೂಲಕ ತುಳಜಾಪುರಕ್ಕೆ ತೆರಳಿ ದೇವಿಯ ದರ್ಶನ ಪಡೆದರೆ, ಸಂಕಷ್ಟಗಳನ್ನು ನಿವಾರಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು.ರಸ್ತೆಯುದ್ದಕ್ಕೂ  ಎಲ್ಲಿ ನೋಡಿದರೂ ಕರ್ನಾಟಕದ ಅಪಾರ ಭಕ್ತರ ದಂಡು ಕಂಡು ಬರುತ್ತಿದೆ ‘ಉಧೆ…ಅಂಬೆ….ಜೈಜೈಜೈ  ಜೈ ಭವಾನಿ…’ ಎಂಬ ಘೋಷಣೆಗಳು ಕೇಳಿ ಬರುತ್ತವೆ.
ಪಾದಯಾತ್ರೆಯಲ್ಲಿ   ಹತ್ತಾರು ಗ್ರಾಮಗಳ ಜನತೆ ಚಿಕ್ಕ ಮಕ್ಕಳು  ವೃದ್ಧರಾದಿಯಾಗಿ ಎಲ್ಲರೂ ಅಂಬಾ ಭವಾನಿ ದರ್ಶನ ಪಡೆಯಲು, ಭಕ್ತಿ ಸಮರ್ಪಣೆಗಾಗಿ  ಅಹೋ ರಾತ್ರಿ ಪಾದಯಾತ್ರೆ ಮೂಲಕ ತೆರಳುವುದು ಹಿಂದಿನಿoದಲೂ ನಡೆದು ಬಂದಿದೆ.

Leave a Reply

Your email address will not be published. Required fields are marked *

error: Content is protected !!